ADVERTISEMENT

ಕೊಡಗಿನಲ್ಲಿ ಮತ್ತೆ ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 13:09 IST
Last Updated 7 ಫೆಬ್ರುವರಿ 2019, 13:09 IST

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರವೂ ಅಕಾಲಿಕ ಮಳೆ ಸುರಿಯಿತು. ಕುಶಾಲನಗರ, ಆನೆಕಾಡು, ಸೋಮವಾರಪೇಟೆ, ಕುಸಬೂರು, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ.

ಕಂಬಿಬಾಣೆ ವ್ಯಾಪ್ತಿಯಲ್ಲಿ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜತೆಗೆ ಮಳೆ ಸುರಿಯುತ್ತಿದ್ದು ರೋಬಸ್ಟಾ ಕಾಫಿ ಒಣಗಿಸಲು ಕಾಫಿ ಬೆಳೆಗಾರರು ಪರದಾಡುತ್ತಿದ್ದಾರೆ.

ಕಾಫಿ ಕೊಯ್ಲು ಮುಗಿಸಿ ಹೂವಿನ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮಾತ್ರ ಈ ಮಳೆ ಅನುಕೂಲವಾಗಿದೆ. ಎರಡು ದಿನ ಮಳೆ ಸುರಿದು ಮತ್ತೊಂದು ತಿಂಗಳು ಕೈಕೊಟ್ಟರೆ ಮುಂದಿನ ವರ್ಷದ ಫಸಲಿಗೆ ಪೆಟ್ಟು ಬೀಳಲಿದೆ ಎಂದು ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ.

ADVERTISEMENT

ಜಿಲ್ಲೆಯ ವಿವಿಧೆಡೆ ಕಾಳುಮೆಣಸಿನ ಬಳ್ಳಿಗಳು ಒಣಗುತ್ತಿದ್ದವು. ಈಗ ಸುರಿಯುತ್ತಿರುವ ಮಳೆಯಿಂದ ಬಳ್ಳಿಗಳಿಗೆ ಅನುಕೂಲ. ಆದರೆ, ಕಾಳುಮೆಣಸು ಕೊಯ್ಲು ಇನ್ನೂ ಆರಂಭಗೊಂಡಿಲ್ಲ. ಫಸಲು ಉದುರುವ ಆತಂಕವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.