ADVERTISEMENT

ಕೊಡವ ಉಡುಗೆ ಧರಿಸಿ ಸಲಿಂಗ ವಿವಾಹ: ಕೊಡವ ಸಮುದಾಯದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 14:33 IST
Last Updated 8 ಅಕ್ಟೋಬರ್ 2020, 14:33 IST
ಮದುವೆಯ ದೃಶ್ಯ
ಮದುವೆಯ ದೃಶ್ಯ   

ಮಡಿಕೇರಿ: ಕೊಡವ ಯುವಕನೊಬ್ಬ ಅಮೆರಿಕದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಆತ ಕೊಡವ ಉಡುಗೆ ತೊಟ್ಟು ಸಲಿಂಗ ವಿವಾಹವಾಗಿದ್ದು ಕೊಡಗು ಜಿಲ್ಲೆಯ ಕೊಡವ ಸಮುದಾಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿರಾಜಪೇಟೆ ತಾಲ್ಲೂಕಿನ ಬೋಳ್ಳರಿಮಾಡಿನ ಕೊಡವ ಕುಟುಂಬದ ಅಧ್ಯಕ್ಷ ಜಯಕುಮಾರ್ ಹಾಗೂ ನಳಿನಿ ದಂಪತಿ ಹಿರಿಯ ಪುತ್ರ ಶರತ್ ಪೊನ್ನಪ್ಪ (38) ಮದುವೆಯಾದ ಯುವಕ. ಇತ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ. ಕಳೆದ ಸೆ.25ರಂದು ಉತ್ತರ ಭಾರತದ ತರುಣ ಸಂದೀಪ್ ದೋಸಾಂಜ್ ಜೊತೆಗೆ ಕ್ಯಾಲಿಫೋರ್ನಿಯಾದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದಾರೆ.

ಮದುವೆಯ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಇಬ್ಬರೂ ಕೊಡವ ಉಡುಪಿನಲ್ಲಿ ಇರುವುದು ಕಂಡುಬಂದಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

ಕೊಡವ ಮುಖಂಡ ಎಂ.ಬಿ. ದೇವಯ್ಯ ಮಾತನಾಡಿ, ‘ಕೊಡಗಿನ ಸಂಸ್ಕೃತಿಗಳನ್ನು ಉಳಿಸಬೇಕಾದ ಯುವಕರು ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೊಡವ ಸಮುದಾಯಕ್ಕೆ ತನ್ನದೇ ಸಂಸ್ಕೃತಿ, ಅಚಾರ– ವಿಚಾರ, ಪದ್ಧತಿ, ಪರಂಪರೆ ಇದೆ. ಇವರಿಗೆ ಅದರ ಅರಿವು ಇದ್ದಂತೆ ಕಾಣಿಸುತ್ತಿಲ್ಲ. ಇವರನ್ನೂ ಯಾರೂ ಕ್ಷಮಿಸಬಾರದು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.