ಮಡಿಕೇರಿ: ಪೊಲೀಸರ ತುರ್ತು ಸ್ಪಂದನಾ ವಾಹನಕ್ಕೆ ಮಡಿಕೇರಿ ನಗರ ಸಂಚಾರ ಠಾಣೆಯ ಪೊಲೀಸರು ₹ 500 ದಂಡ ವಿಧಿಸಿದ್ದಾರೆ.
ಇಲ್ಲಿ ಏಕಮುಖ ಸಂಚಾರ ಇರುವ ಕಾಲೇಜ್ ರಸ್ತೆಯ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದ ಚಾಲಕ ಜಯಶಂಕರ್ ಅವರಿಗೆ ದಂಡ ವಿಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ‘ಎಲ್ಲರಿಗೂ ಒಂದೇ ಕಾನೂನು’ ಎಂಬ ಮಾತಿನಂತೆ ಪೊಲೀಸರೇ ತಮ್ಮ ವಾಹನಗಳಿಗೆ ದಂಡ ವಿಧಿಸುತ್ತಿರುವುದನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.