ADVERTISEMENT

ಶನಿವಾರಸಂತೆ: ಶುದ್ಧ ನೀರಿಗಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 17:01 IST
Last Updated 24 ಆಗಸ್ಟ್ 2020, 17:01 IST
ಶನಿವಾರಸಂತೆ 1ನೇ ವಿಭಾಗದಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ
ಶನಿವಾರಸಂತೆ 1ನೇ ವಿಭಾಗದಲ್ಲಿ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ   

ಶನಿವಾರಸಂತೆ: ಪಟ್ಟಣದ 1ನೇ ವಿಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 25 ದಿನಗಳಿಂದ ಕೆಟ್ಟು ನಿಂತಿದ್ದು. ಈ ಭಾಗದ ಜನ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಘಟಕದಲ್ಲಿ 100 ಮಂದಿ ಕಾರ್ಡ್‌ದಾರರಿದ್ದು ಕಾರ್ಡ್ ತೋರಿಸಿದರೆ ₹ 5ಕ್ಕೆ 20 ಲೀಟರ್ ನೀರು ದೊರೆಯುತ್ತಿತ್ತು. ಬ್ಯಾಂಕ್, ಪೊಲೀಸ್ ವಸತಿಗೃಹ, ಕಂದಾಯ ಇಲಾಖೆ. ಆಸ್ಪತ್ರೆ, ಉದ್ಯೋಗಸ್ಥರೆ ಅಧಿಕವಾಗಿರುವ ಈ ವಿಭಾಗದಲ್ಲಿ ಘಟಕದ ನೀರನ್ನೇ ಉಪಯೋಗಿಸುತ್ತಿದ್ದರು. ಆದರೆ, ಅದು ಕೆಟ್ಟಿರುವುದರಿಂದ ಅಂಗಡಿಗಳಲ್ಲಿ ₹ 40 ನೀಡಿ 20 ಲೀಟರ್ ನೀರಿನ ಕ್ಯಾನ್ ಪಡೆಯಬೇಕಾಗಿದೆ.

‘ಪಿಡಿಒ ಬಿ.ಜೆ.ಮೇದಪ್ಪ ಸಂಬಂಧಪಟ್ಟ ಎಂಜಿನಿಯರ್‌ಗೆ ದೂರವಾಣಿ ಕರೆ ಮಾಡಿ ದುರಸ್ತಿಪಡಿಸುವಂತೆ ಕೋರಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸುತ್ತಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.