ADVERTISEMENT

ವಿರಾಜಪೇಟೆ | ವೈದ್ಯರು, ಸಿಬ್ಬಂದಿ ಕೊರತೆ ನೀಗಿಸಿದಿದ್ದಲ್ಲಿ ಪ್ರತಿಭಟನೆ

ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ; ಸಿಪಿಎಂ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 4:31 IST
Last Updated 21 ಜುಲೈ 2024, 4:31 IST
<div class="paragraphs"><p> ಸಿಪಿಎಂ&nbsp; (ಪ್ರಾತಿನಿಧಿಕ ಚಿತ್ರ)</p></div>

ಸಿಪಿಎಂ  (ಪ್ರಾತಿನಿಧಿಕ ಚಿತ್ರ)

   

ವಿರಾಜಪೇಟೆ: ತಾಲ್ಲೂಕು ಕೇಂದ್ರವಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳಿದ್ದರೂ ವೈದ್ಯರು ಸೇರಿ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ ಎಂದು ಸಿಪಿಐಎಂ ಘಟಕದ ಕಾರ್ಯದರ್ಶಿ ಶಾಜಿ ರಮೇಶ್ ಹೇಳಿದರು.

 ಗುರುವಾರ ಇಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ‘250 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು. ಆಸ್ಪತ್ರೆಯಲ್ಲಿ ಕಾಯಂ ಸ್ತ್ರೀರೋಗ ತಜ್ಞರು ಇಲ್ಲ. ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ.  ಬೆರಳೆಣಿಕೆ ವೈದ್ಯರೇ ಎಲ್ಲಾ ರೋಗಿಗಳನ್ನೂ ಪರೀಕ್ಷಿಸಬೇಕಿದ್ದು, ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಉದ್ದನೆ ಸಾಲಿನಲ್ಲಿ ನಿಲ್ಲುವ ಸಂಕಷ್ಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ದರೂ ಇಲ್ಲದಂತಾಗಿದೆ. ತುರ್ತು ನಿಗಾ ಘಟಕ, ತುರ್ತು ಚಿಕಿತ್ಸಾ ಘಟಕ, ಡಯಾಲಿಸಿಸ್ ಸೆಂಟರ್, ಸ್ಕ್ಯಾನಿಂಗ್, ಎಕ್ಸ್‌ರೇ, ಪ್ರಯೋಗಾಲಯಗಳಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲ. ಈ  ಸಮಸ್ಯೆಗಳನ್ನು ಸರ್ಕಾರ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾ ಸಮಿತಿಯ ಎ.ಸಿ.ಸಾಬು ಮಾತನಾಡಿ,‘ಡೆಂಗಿ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೈಗೊಂಡಿಲ್ಲ. ಔಷಧಿಗಳನ್ನು ಖಾಸಗಿ ಔಷಧ ಅಂಗಡಿಯಿಂದ ಖರೀದಿಸಲು ಸರ್ಕಾರಿ ಆಸ್ಪತ್ರೆ ವೈದ್ಯರು ಚೀಟಿ ಬರೆದುಕೊಡುತ್ತಾರೆ. ಶನಿವಾರ ಮತ್ತು ಭಾನುವಾರ ಬಂದರೆ ಅಂದು ಆಸ್ಪತ್ರೆ ವೈದ್ಯರು ರಜೆಯಲ್ಲಿರುತ್ತಾರೆ. ಕೊರತೆ ಬಗೆಹರಿಸಬೇಕು, ಶುದ್ಧ ಕುಡಿಯುವ ನೀರು ಮತ್ತು ಕ್ಯಾಂಟಿನ್ ವ್ಯವಸ್ಥೆ ಕೂಡಲೇ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಸಮಿತಿಯ ಪಿ.ಖಾಲಿದ್, ಕೆ.ಕೆ.ಹರಿದಾಸ್, ಕೆ.ರದೀಶ್, ಕೆ.ಖಾಶಿಂ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.