ADVERTISEMENT

ಕೊಡಗಿನಲ್ಲಿ ಮುಂದುವರಿದ ಧಾರಾಕಾರ ಮಳೆ

ಭಾಗಮಂಡಲದಲ್ಲಿ ರಸ್ತೆಗೆ ಬಂದ ನೀರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 5:00 IST
Last Updated 23 ಜುಲೈ 2023, 5:00 IST
ಭಾಗಮಂಡಲ- ನಾಪೋಕ್ಲು ರಸ್ತೆಗೆ ನೀರು ಬಂದಿರುವುದು
ಭಾಗಮಂಡಲ- ನಾಪೋಕ್ಲು ರಸ್ತೆಗೆ ನೀರು ಬಂದಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾಗಮಂಡಲದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನಾಪೋಕ್ಲು- ಭಾಗಮಂಡಲ ರಸ್ತೆಗೆ ನೀರು ಬಂದಿದ್ದು, ಸಂಚಾರ ಸ್ಥಗಿತಗೊಳ್ಳುವ ಭೀತಿ ಮೂಡಿದೆ.

ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನಾಪೋಕ್ಲು ಸಮೀಪದ ಚೆರಿಯಾಪರಂಬುವಿನ ಕಾವೇರಿ ಹೊಳೆಯ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆಯ ಮೇಲೆ ಒಂದರಿಂದ ಒಂದೂವರೆ ಅಡಿ ನೀರು ನಿಂತಿದೆ. ಕುಂಜಿಲ ಗ್ರಾಮದ ಮಕ್ಕಿ ಉಮ್ಮರ್ ಎಂಬುವವರ ಮನೆಯ ಚಾವಣಿಯ ಶೀಟ್ ಗಳು ಹಾರಿ ಹೋಗಿವೆ.

ಕಲ್ಮಂಟಿ ಜಂಕ್ಷನ್ ನ ಕಾರೆಕಾಡ್- ಗರ್ವಾಲೆ ರಸ್ತೆಯಲ್ಲಿ ಹಾಗೂ ಸುಂಟಿಕೊಪ್ಪ- ಮಾದಾಪುರ ರಸ್ತೆಯ ಪನ್ಯ ಗ್ರಾಮದ ಸಮೀಪ ರಸ್ತೆಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.