
ಪ್ರಜಾವಾಣಿ ವಾರ್ತೆ
ಕಡತ
(ಸಾಂದರ್ಭಿಕ ಚಿತ್ರ)
ಮಡಿಕೇರಿ: ರಾಯಚೂರಿನಲ್ಲಿ ಡಿ. 20 ಹಾಗೂ 21ರಂದು ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಿರುವ ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಪುರಸ್ಕಾರಕ್ಕೆ ಕೊಡಗಿನ ಸಾಮಾಜಿಕ ಕಾರ್ಯಕರ್ತೆ ಎಚ್.ಎಂ.ಕಾವೇರಿ ಸೇರಿ ಐವರು ಆಯ್ಕೆಯಾಗಿದ್ದಾರೆ.
ಕೊಡಗಿನ ಕವಯಿತ್ರಿ ರಮ್ಯ ಮೂರ್ನಾಡು (ಕಾವ್ಯ), ಮಾರುತಿ ದಾಸಣ್ಣವರ್ (ಪುಸ್ತಕ) ಟಿ.ಎಸ್.ಮಹಾಲಕ್ಷ್ಮಿ (ಸಾಧಕ ಬರಹಗಾರ್ತಿ), ಎ.ಧನುಷ್ (ಲಾಂಚನ ರಚನೆ) ಅವರು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ ಎಂದು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ್ ಮೌರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.