ADVERTISEMENT

ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಏ.1ರಂದು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 14:47 IST
Last Updated 20 ಮಾರ್ಚ್ 2025, 14:47 IST

ಕುಶಾಲನಗರ: ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಹುಟ್ಟು ಹಬ್ಬ ಆಚರಣೆ ಪಟ್ಟಣದಲ್ಲಿ ಏ.1 ರಂದು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.

ಇಲ್ಲಿನ ಸಿದ್ದಗಂಗಾ ಭಕ್ತ ಮಂಡಳಿಯಿಂದ ನಡೆಯಲಿರುವ ಹುಟ್ಟು ಹಬ್ಬದಾಚರಣೆ ನಿಮಿತ್ತ, ಪಟ್ಟಣದ ಗಣಪತಿ ದೇವಾಲಯದಿಂದ ಅಂದು ಬೆಳಿಗ್ಗೆ 8-30 ಗಂಟೆಗೆ ಶ್ರೀಗಳ ಭಾವಚಿತ್ರ ಅಲಂಕೃತ ವಾಹನದಲ್ಲಿ ಇರಿಸಿ  ಸೋಮೇಶ್ವರ ದೇವಾಲಯದವರೆಗೆ ಮೆರವಣಿಗೆ ನಡೆಯಲಿದೆ.

ನಂತರ ದೇವಾಲಯದ ಆವರಣದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದ್ದು, ಇದೇ ಸಂದರ್ಭ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಸಿದ್ದಗಂಗಾಶ್ರೀ ಕಾಯಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ADVERTISEMENT

ಬಳಿಕ ನೆರೆದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿದ್ದಗಂಗಾ ಭಕ್ತ ಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಹಾಗೂ ಬಿ.ನಟರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.