ಕೊಯನಾಡು ಗ್ರಾಮದ ಸರ್ಕಾರಿ ಶಾಲೆ
ಮಡಿಕೇರಿ: ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಶಾಲೆಯ ಮೇಲೆ ಸೋಮವಾರ ತಡರಾತ್ರಿ ಭಾರಿ ಸ್ವರೂಪದ ಮಣ್ಣು, ಬಂಡೆಗಲ್ಲುಗಳು ಕುಸಿದು, ಅಪಾರ ಹಾನಿ ಸಂಭವಿಸಿದೆ.
ಈಚೆಗೆ ಸಹ ಇಲ್ಲಿ ಮಣ್ಣು ಕುಸಿದು ಕೊಠಡಿಗೆ ಹಾನಿಯಾಗಿತ್ತು. ಈಗ ದೊಡ್ಡ ಪ್ರಮಾಣದಲ್ಲೇ ಕುಸಿತ ಸಂಭವಿಸಿದ್ದು ಆತಂಕ ಎದುರಾಗಿದೆ.
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆಯ ಉಪ ನಿರ್ದೇಶಕ ರಂಗಧಾಮಪ್ಪ ತೆರಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.