ADVERTISEMENT

ಸುಂಟಿಕೊಪ್ಪ: ವರ್ಕ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 13:07 IST
Last Updated 18 ಡಿಸೆಂಬರ್ 2023, 13:07 IST
ಮಣಿಕಂಠ
ಮಣಿಕಂಠ   

ಸುಂಟಿಕೊಪ್ಪ: ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಪಿ.ಆರ್.ಸುನಿಲ್‌ಕುಮಾರ್ ಅವರು ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಸೌಮ್ಯಾ ಎಂಜಿನಿಯರಿಂಗ್ ವರ್ಕ್ಸ್‌ನಲ್ಲಿ ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರು ಅಧ್ಯಕ್ಷತೆಯಲ್ಲಿ ನಡೆದ 21ನೇ ವಾರ್ಷಿಕ ಮಹಾಸಭೆಯಲ್ಲಿ‌ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಿ.ಆರ್.ಸುನಿಲ್ ಕುಮಾರ್

ಉಪಾಧ್ಯಕ್ಷರಾಗಿ ಅನಿಸ್, ಪ್ರಧಾನ ಕಾರ್ಯದರ್ಶಿಯಾಗಿ ಮಣಿಕಂಠ, ಸಹಕಾರ್ಯದರ್ಶಿಯಾಗಿ ನಿತಿನ್, ಸಂಘಟನಾ ಕಾರ್ಯದರ್ಶಿಯಾಗಿ ಫೆಲಿಕ್ಸ್, ಖಜಾಂಚಿಯಾಗಿ ಸಂದೀಪ್‌, ಗೌರವಾಧ್ಯಕ್ಷರಾಗಿ ವಿ.ಎ.ಸಂತೋಷ್,  ಪಿ.ಆರ್.ಸುಕುಮಾರ್, ಕೆ.ಪಿ.ವಿನೋದ್, ಸಮಿತಿ ಸದಸ್ಯರಾಗಿ ಕೆ.ಜಿ.ಸತೀಶ್, ಯೇಸುದಾಸ್, ಸುರೇಶ್,ರಜಾಕ್ ಹಾಗೂ 9 ಮಂದಿ ಆಡಳಿತ ಮಂಡಳಿ ಸಮಿತಿಯನ್ನು ರಚಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.