ADVERTISEMENT

ಶ್ರದ್ಧಾಭಕ್ತಿಯ ಅಗ್ನಿ ಚಾಮುಂಡಿ ತೆರೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಮೇ 2025, 7:16 IST
Last Updated 13 ಮೇ 2025, 7:16 IST
ಅಗ್ನಿಕುಂಡ
ಅಗ್ನಿಕುಂಡ   

ವಿರಾಜಪೇಟೆ: ಸಮೀಪದ ಬಾಳುಗೋಡುವಿನ ಅಗ್ನಿ ಚಾಮುಂಡಿ ದೇವಿ ವಾರ್ಷಿಕ ತೆರೆ ಮಹೋತ್ಸವವು ಈಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಬಾಳುಗೋಡು ಪೆರುಂಬಾಡಿ ಗ್ರಾಮದ ಚಾಮುಂಡಿ ದೇವಿಯ 31ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಮೊದಲ ದಿನ ಬೆಳಿಗ್ಗೆ ಗಣಪತಿ ಹೋಮ ನಡೆಯಿತು.

ಬಳಿಕ ನವ ಕಳಶ ಆಶ್ಲೇಷ ಬಲಿ ನಡೆದು ತಕ್ಕರ ಮನೆಯಿಂದ ಭಂಡಾರ ತರಲಾಯಿತು. ಬಳಿಕ ನಾಗದೇವಿಗೆ ವಿಶೇಷ ಪೂಜೆ, ದೇವರದರ್ಶನ, ನಂತರ ಚಾಮುಂಡೇಶ್ವರಿಗೆ ಅಭಿಷೇಕ ನಡೆಯಿತು. ಸಂಜೆ 7ಕ್ಕೆ ಗ್ರಾಮಸ್ಥರ ನೆರವಿನಿಂದ ದೇವಾಲಯದ ಆವರಣದಲ್ಲಿ ಬೃಹತ್ ಅಗ್ನಿಕುಂಡ ನಿರ್ಮಿಸಲಾಯಿತು.

ADVERTISEMENT

ಕುಟ್ಟಂದಿ ಕುತ್ತುನಾಡ್ ಗ್ರಾಮದ ಕಿಶನ್ ಪಣಿಕರ್ ನೇತೃತ್ವದಲ್ಲಿ ಕ್ರಮವಾಗಿ ವಿಷ್ಣುಮೂರ್ತಿ ತೋಟಂ, ಚಾಮುಂಡಿ ಅಮ್ಮ ತೋಟಂ, ಕುಟ್ಟಿಚಾತನ್ ತೆರೆ, ಭೈರವ ತೆರೆ, ಕರಿವಾಳ್ ಭಗವತಿ ಮತ್ತು ಉಚ್ಚುಟಮ್ಮ ತೆರೆಗಳು ಮುಂಜಾನೆಯವರೆಗೆ ನಡೆಯಿತು.

ಉತ್ಸವದ 2ನೇ ದಿನದಂದು ಬೆಳಿಗ್ಗೆ ಚಾಮುಂಡಿ ವಿಷ್ಣುಮೂರ್ತಿ ಕೋಲ ನಡೆಯಿತು. ಗುಳಿಗನ್ ತೆರೆ, ಚಾಮುಂಡಿ ಅಮ್ಮ ತೆರೆ ನಡೆಯಿತು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯದ ಕೊಕ್ಕಲೆಮಾಡ ಮಣಿ, ಕಾರ್ಯದರ್ಶಿ ಟಿ.ಜಿ. ಗಣೇಶ್ ಭಾಗವಹಿಸಿದ್ದರು.

ವಿರಾಜಪೇಟೆ ಸಮೀಪದ ಬಾಳುಗೋಡುವಿನ ಶ್ರೀ ಅಗ್ನಿ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವವು ಈಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು. 12ವಿಪಿಟಿ4: ಅಗ್ನಿಕುಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.