ADVERTISEMENT

ಮಣ್ಣು ಅಗೆದ ಕಡೆಗಳಲ್ಲಿ ಉಕ್ಕುವ ನೀರು

ತೋರದಲ್ಲಿ ಪತ್ತೆಯಾಗದ 7 ಮಂದಿ, ಕಾರ್ಯಾಚರಣೆಗೆ ಗರುಡ ಪಡೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 10:32 IST
Last Updated 16 ಆಗಸ್ಟ್ 2019, 10:32 IST
ತಂಡಗುಂಡಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ
ತಂಡಗುಂಡಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ   

ವಿರಾಜಪೇಟೆ: ಸಮೀಪದ ತೋರದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ನಾಪತ್ತೆಯಾಗಿರುವ 7 ಮಂದಿ ಪತ್ತೆಗಾಗಿ ಮಂಗಳವಾರವೂ ಶೋಧ ಕಾರ್ಯ ಮುಂದುವರೆದರೂ ನಾಪತ್ತೆಯಾದವರ ಸುಳಿವು ಲಭ್ಯವಾಗಿಲ್ಲ.

ಭೂಕುಸಿತದಲ್ಲಿ ನಾಪತ್ತೆಯಾದ 10 ಮಂದಿಯಲ್ಲಿ ಈವರೆಗೆ 3 ಮಂದಿಯ ಮೃತದೇಹ ಪತ್ತೆಯಾಗಿದ್ದು, ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎನ್‌ಡಿಆರ್‌ಎಫ್ ತಂಡ, ಪೊಲೀಸ್‌ ಹಾಗೂ ಗರುಡ ಪಡೆ ಶೋಧ ಕಾರ್ಯ ನಡೆಸುತ್ತಿವೆ.

ಜೆಸಿಬಿ ಯಂತ್ರಗಳು ಶೋಧಕ್ಕಾಗಿ ಮಣ್ಣನ್ನು ಅಗೆದ ಕಡೆಗಳಲ್ಲಿ ನೀರು ಉಕ್ಕಿ ಬರುತ್ತಿದೆ. ಮೃತದೇಹಗಳು ಹುದುಗಿರುವ ಸ್ಥಳವನ್ನು ಪತ್ತೆ ಹಚ್ಚಲು ಕಷ್ಟವಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 27 ಕೇಂದ್ರಗಳು: ತಾಲ್ಲೂಕಿನಲ್ಲಿ ಒಟ್ಟು 27 ಸಂತ್ರಸ್ತರ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಜೊತೆಗೆ ಎರಡು ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಈ 27 ಕೇಂದ್ರಗಳಲ್ಲಿ 1,428 ಕುಟುಂಬಗಳ ಒಟ್ಟು 4,551 ಸಂತ್ರಸ್ತರು ಆಶ್ರಯ ಪಡೆಯುತ್ತಿದ್ದಾರೆ. ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ವಿರಾಜಪೇಟೆ ವಿಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ 8.6 ಮಿ.ಮೀ ಮಳೆ ಸುರಿದಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.