ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಬಲಮುರಿ ಸಂಪರ್ಕ ರಸ್ತೆಯಲ್ಲಿ ಶನಿವಾರ ಟಿಪ್ಪರ್ ಚರಂಡಿಗೆ ಉರುಳಿತು.
ಬಲಮುರಿ ಗ್ರಾಮದಿಂದ ಮೂರ್ನಾಡು ಪಟ್ಟಣದತ್ತ ತರಳುತ್ತಿದ್ದ ಟಿಪ್ಪರ್ ಎದುರಿಗೆ ಕಾರು ಬಂದಿದ್ದರಿಂದ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ರಸ್ತೆಯ ಬದಿಯಲ್ಲಿ ವಿಪರೀತ ಕಾಡು ಬೆಳೆದಿರುವುದೇ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೂಡಲೇ ಕಾಡು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.