ADVERTISEMENT

ಕೊಡಗಿನ ಇಂದಿನ ಪರಿಸರ ಎಂದಿನಂತೆ ಕಂಗೊಳಿಸಬೇಕು: ವಲಯ ಅರಣ್ಯ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:36 IST
Last Updated 27 ಆಗಸ್ಟ್ 2024, 4:36 IST
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿದ ಗಾನಶ್ರೀ ಅವರಿಗೆ ರೈತರು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಿದರು
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿದ ಗಾನಶ್ರೀ ಅವರಿಗೆ ರೈತರು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಿದರು   

ಶನಿವಾರಸಂತೆ: ‘ಕೊಡಗಿನ ಇಂದಿನ ಪರಿಸರ ಎಂದಿನಂತೆ ಕಂಗೊಳಿಸಬೇಕು. ಇದಕ್ಕಾಗಿ ಎಲ್ಲರೂ ನಿರಂತರವಾಗಿ ಪ್ರಯತ್ನ ನಡೆಸಬೇಕು’ ಎಂದು ವಲಯ ಅರಣ್ಯ ಅಧಿಕಾರಿ ಗಾನಶ್ರೀ ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿರುವ ಅವರಿಗೆ ಇಲ್ಲಿ ಸೋಮವಾರ ರೈತರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಮುಖವಾಗಿ ರೈತರಿಗೆ ಕಾನೂನಿನ ಅರಿವು ಮೂಡಿಸಬೇಕು. ಕೊಡಗಿನ ಕಾವೇರಿ ನೀರು ಹಲವು ನಗರಗಳ ಜೀವನಕ್ಕೆ ಆಧಾರವಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ತೊಡಗೋಣ ಎಂದರು.

ADVERTISEMENT

ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಮಾತನಾಡಿ, ‘ಗಾನಶ್ರೀ ಅವರು ಕರ್ತವ್ಯದ ವೇಳೆ ಇಲ್ಲಿನ ಜನರ ಮೂಲಭೂತ ಸಮಸ್ಯೆಗಳನ್ನು ಅರಿತು ಪರಿಸರ ರಕ್ಷಣೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ರೈತರಿಗೆ ಬೇಕಾಗಿರುವಂತಹ ಉಪಯುಕ್ತವಾದ ಮಾಹಿತಿಯನ್ನು ಮತ್ತು ಆನೆ ಮತ್ತು ಮಾನವ ಸಂಘರ್ಷದ ಬಗ್ಗೆ ವಿಶೇಷ ಕಾಳಜಿ ವಹಿಸಿ ರೈತರಿಗೆ ಸೂಕ್ತ ಸಮಯದಲ್ಲಿ ಆನೆ ಸಂಚರಿಸುತ್ತಿರುವ ಮಾಹಿತಿಯನ್ನು ಒದಗಿಸಿದ್ದಾರೆ’ ಎಂದು ಶ್ಲಾಘಿಸಿದರು.

ಮುಖಂಡರಾದ ಕೆ.ಟಿ.ಹರೀಶ್, ಪ್ರಕಾಶ್, ಸಂತೋಷ್ ತೋಯಳ್ಳಿ, ಮಾದರಿ ಬಸವರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.