ADVERTISEMENT

ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿ: ಜೈ ಭೀಮ್ ತಂಡ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:34 IST
Last Updated 23 ಮೇ 2025, 12:34 IST
ಸಿದ್ದಾಪುರದ ಸಿಟಿ ಬಾಯ್ಸ್ ಯುವ ಸಂಘ ಆಯೋಜಿಸಿದ್ದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈ ಭೀಮ್ ತಂಡ  ಗೆಲುವು ಸಾಧಿಸಿತು
ಸಿದ್ದಾಪುರದ ಸಿಟಿ ಬಾಯ್ಸ್ ಯುವ ಸಂಘ ಆಯೋಜಿಸಿದ್ದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈ ಭೀಮ್ ತಂಡ  ಗೆಲುವು ಸಾಧಿಸಿತು   

ಸಿದ್ದಾಪುರ: ಸಿಟಿ ಬಾಯ್ಸ್ ಯುವ ಸಂಘ ಆಯೋಜಿಸಿದ್ದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈ ಭೀಮ್ ತಂಡ ಚಾಂಪಿಯನ್ ಆಗಿದೆ.

ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಆಟಗಾರರನ್ನು ಒಳಗೊಂಡ 22 ತಂಡಗಳ ನಡುವೆ ಇಲ್ಲಿಯ ಸ್ಟೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ನಾಲ್ಕು ದಿನ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅಲ್ ಅಮೀನ್ ಗುಹ್ಯ ತಂಡವನ್ನು ಮಣಿಸಿ ಜೈ ಭೀಮ್ ತಂಡ ಗೆಲುವು ಸಾಧಿಸಿತು.

ಫೈನಲ್ ಪಂದ್ಯದಲ್ಲಿ ಆಲ್ ರೌಂಡರ್ ಆಟ ತೋರಿದ ರಂಜೀವ್ ಪಂದ್ಯ ಪುರುಷೋತ್ತಮ, ಡೋಮಿನೋಟರ್ಸ್ ತಂಡದ ಅಜ್ಮಲ್ ಸರಣಿ ಶ್ರೇಷ್ಠ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್, ಅಡಿಯೋಸ್ ಅಮಿಗೋಸ್ ತಂಡದ ಯಾಕೂಬ್ ಬೆಸ್ಟ್ ಬೌಲರ್, ಹುಸೈನ್ ಫ್ರೆಂಡ್ಸ್ ತಂಡದ ಬಾಸಿತ್ ಬೆಸ್ಟ್ ಕ್ಯಾಚ್, ಅಲ್ ಅಮೀನ್ ತಂಡದ ಅಝರ್ ಎಮರ್ಜಿಂಗ್ ಪ್ಲೆಯರ್, ಪವರ್ ಲೈನ್ ತಂಡದ ಚಾಚು ಲೆಜೆಂಡ್ ಪ್ಲೆಯರ್, ಪ್ಯಾರಡೈಸ್ ತಂಡದ ಬಶೀರ್ ಸೀನಿಯರ್ ಪ್ಲೆಯರ್, ಅಲ್ ಅಮೀನ್ ತಂಡದ ವಿನೋದ್ ವಿನೋದ್ ಸೂಪರ್ ಸೀನಿಯರ್ ಪ್ಲೆಯರ್, ಡೋಮಿನೋಟರ್ಸ್ ತಂಡದ ಯೂನುಸ್ ಹಾಗೂ ಸುಹೈಲ್ ಉತ್ತಮ ಫಿಲ್ಡರ್ ಪ್ರಶಸ್ತಿಯನ್ನು ಪಡೆದುಕೊಂಡರು.

ADVERTISEMENT

ಪಂದ್ಯಾವಳಿಯ ತೀರ್ಪುಗಾರರಾಗಿ ನೆಲ್ಯಹುದಿಕೇರಿಯ ಮುಸ್ತಫ, ನಜೀಬ್ ಹಾಗೂ ಸ್ಕೋರರಾಗಿ ರಾಧ ಮತ್ತು ಚಿಂಜು ಕಾರ್ಯನಿರ್ವಹಿಸಿದರು. ಸಮಾರೋಪದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ ಬಶೀರ್, ಸಿಟಿ ಬಾಯ್ಸ್ ಯುವ ಸಂಘದ ಅಧ್ಯಕ್ಷ ಎ.ಎಸ್. ಮುಸ್ತಫ, ಗ್ರಾಮ ಪಂಚಾಯಿತಿ ಸದಸ್ಯರಾದ ಜಾಫರ್, ಹಸ್ಸನ್ ಪ್ರಮುಖರಾದ ಬೆಳ್ಳಿಯಪ್ಪ, ಕೆ.ಯು ಯೂಸುಫ್, ಕೆ.ಯು ಮುಸ್ತಫ, ಅಸ್ಕರ್, ರವಿ, ಸಿದ್ದೀಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.