ವಿರಾಜಪೇಟೆ: ಕೇರಳ ರಾಜ್ಯದ ಲಾಟರಿಯನ್ನು ಪಟ್ಟಣದಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಟ್ಟಣದ ಕಲ್ಲುಬಾಣೆಯ ಅಬುಬಕರ್ ಮತ್ತು ಪಿರಿಯಪಟ್ಟಣದ ಪಿ.ಕೆ.ಚಂದ್ರ ಬಂಧಿತ ಆರೋಪಿಗಳು.
ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿದಾಗ ₹43,760 ಮೌಲ್ಯದ ಒಟ್ಟು 1,094 ಲಾಟರಿ ಚೀಟಿಗಳು ಮತ್ತು ಲಾಟರಿ ಮಾರಾಟದಿಂದ ಬಂದ ₹1,690 ನಗದನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಿಪಿಐ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎನ್.ಎಸ್. ಲೋಕೇಶ್, ಟಿ.ಎಸ್.ಗಿರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.