
ಪ್ರಜಾವಾಣಿ ವಾರ್ತೆಸೋಮವಾರಪೇಟೆ: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ರಾಮಮಂದಿರದಲ್ಲಿ 7ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮ ಶನಿವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವಾಲಯವನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆ 7ರಿಂದ 10 ಮತ್ತು 5 ರಿಂದ 8.30 ರವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.
ಸಂಜೆ 6.30ರಿಂದ ಸೀತಾ ಬಳಗದಿಂದ ‘ವಿಷ್ಣು ಸಹಸ್ರ ನಾಮಪಠಣ’ ಹಾಗೂ 6.30 ರಿಂದ ಚಿಕ್ಕಮಗಳೂರಿನ ವಾಗ್ಮಿ ಸಾಯಿನಂದನ್ ಅಯ್ಯಂಗಾರ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸೀತಾ ಬಳಗದ ಅಧ್ಯಕ್ಷೆ ಯಶೋಧ, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.