
ವಿರಾಜಪೇಟೆ: ‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಸಿಕೊಂಡು ಕ್ರೀಡೆಯಲ್ಲೂ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶೀಭಾ ಪೃಥ್ವಿನಾಥ್ ಹೇಳಿದರು.
ಅಸೋಸಿಯೇಷನ್ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಪಟ್ಟಣದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಆಟೋಟಗಳ ಸ್ಪರ್ಧೆ, ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಸೋಸಿಯೇಷನ್‌ನಿಂದ ಮಹಿಳೆಯರಿಗೆ ಟೈಲರಿಂಗ್, ಸ್ವ ಉದ್ಯೋಗಕ್ಕಾಗಿ ಧನ ಸಹಾಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗಾಗಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಅಸೋಸಿಯೇಷನ್ ಕಾರ್ಯದರ್ಶಿ ಪುಷ್ಪಲತಾ ಶಿವಪ್ಪ ಮಾತನಾಡಿ, ‘ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡವನ್ನೇ ಮಾತನಾಡಬೇಕು. ಇತರರಿಗೂ ಕನ್ನಡ ಕಲಿಸಬೇಕು. ಕನ್ನಡ ನಾಡು, ನುಡಿ ಉಳಿಸಿ ಬೆಳೆಸಲು ಮುಂದಾಗಬೇಕು’ ಎಂದರು.
ಮುಖ್ಯಶಿಕ್ಷಕಿ ಎನ್.ಅನುಸೂಯ ಮಾತನಾಡಿ, ‘ಮಕ್ಕಳು ಹೆಚ್ಚಿನ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗುವ ಮೂಲಕ ತಮ್ಮ ಪೋಷಕರ ಆಸೆಗಳನ್ನು ನೆರವೇರಿಸಬೇಕು’ ಎಂದರು.
ಅಸೋಸಿಯೇಷನ್ ಉಪಾಧ್ಯಕ್ಷೆ ಚೈತ್ರ ಮೋಹನ್, ಗೌರವ ಅಧ್ಯಕ್ಷೆ ರೀತಾ ರಾಜನ್, ಸಹ ಕಾರ್ಯದರ್ಶಿ ಪದ್ಮ, ಖಜಾಂಚಿ ಶ್ರೀಕಲಾ, ಸ್ಮಿತಾ ಸಂತೋಷ್, ರಾಖಿ ಸಜೀವನ್, ಶ್ರೀದೇವಿ ಸಂತೋಷ್, ಶಾಂತ ಚಂದ್ರನ್, ಶೀಲಾ ಸುನೀಲ್, ಹೇಮಾ, ಪುರಸಭೆ ಮಾಜಿ ಸದಸ್ಯ ಸಿ.ಕೆ.ಪೃಥ್ವಿನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.