ADVERTISEMENT

ಸಿದ್ದಾಪುರ| ಕಾಡು ಹಂದಿಗಳ ಹಾವಳಿ: ವಾಹನ ಸವಾರರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:45 IST
Last Updated 4 ಜನವರಿ 2026, 5:45 IST
ಕಾಡುಹಂದಿಗೆ ಡಿಕ್ಕಿಹೊಡೆದ ಪರಿಣಾಮ ಹರಿಶ್ವಂದ್ರ ಹಾಗೂ ಹರಿಲಾಲ್ ಅವರಿಗೆ ಗಾಯವಾಗಿದೆ.
ಕಾಡುಹಂದಿಗೆ ಡಿಕ್ಕಿಹೊಡೆದ ಪರಿಣಾಮ ಹರಿಶ್ವಂದ್ರ ಹಾಗೂ ಹರಿಲಾಲ್ ಅವರಿಗೆ ಗಾಯವಾಗಿದೆ.   

ಸಿದ್ದಾಪುರ: ಚೆಟ್ಟಳ್ಳಿ, ಕೂಡ್ಲೂರು ಭಾಗದಲ್ಲಿ ಕಾಡು ಹಂದಿ ಹಾವಳಿ ಹೆಚ್ಚಾಗಿದ್ದು, ಅವುಗಳಿಂದಾಗಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ.

 ಡಿ.31 ರಂದು ಚೆಟ್ಟಳ್ಳಿ ನಿವಾಸಿ ಹರಿಶ್ಚಂದ್ರ ಹಾಗೂ ಮಗ ಹರಿಲಾಲ್ ದ್ವಿಚಕ್ರ ವಾಹನದಲ್ಲಿ ಸಿದ್ದಾಪುರದಿಂದ ಚೆಟ್ಟಳ್ಳಿಗೆ ತೆರಳುವ ವೇಳೆ ಅಡ್ಡಬಂದ ಕಾಡು ಹಂದಿಗೆ ಡಿಕ್ಕಿ ಹೊಡೆದಿದೆ.  ಇಬ್ಬರಿಗೂ ಗಾಯವಾಗಿದ್ದು, ದ್ವಿಚಕ್ರ ವಾಹನ ಜಖಂಗೊಂಡಿದೆ. 

ಇತ್ತೀಚೆಗೆ ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಮಹೇಂದ್ರ ಎಂಬುವವರು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಕಾಡು ಹಂದಿ ಅಡ್ಡ ಬಂದಿದ್ದು, ರಸ್ತೆಗೆ  ಬಿದ್ದು ಅವರ ಕಾಲು ಹಾಗೂ ಬೆನ್ನಿಗೆ ಗಾಯವಾಗಿದೆ. ಬ್ಯಾಗ್‌ನಲ್ಲಿದ್ದ ಲ್ಯಾಪ್ ಟಾಪ್ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿದೆ. ಕಾಡು ಹಂದಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.