ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಊರುಗುಪ್ಪೆ ಪೈಸಾರಿ ಬಳಿಯ ತೋಟವೊಂದರಲ್ಲಿ 18 ವರ್ಷದ ಹೆಣ್ಣಾನೆಯ ಕಳೇಬರವು ಗುರುವಾರ ಪತ್ತೆಯಾಗಿದೆ.
ಸುಂಟಿಕೊಪ್ಪ (ಕೊಡಗು ಜಿಲ್ಲೆ): ಸಮೀಪದ ಕಂಬಿಬಾಣೆ ಊರುಗುಪ್ಪೆ ಪೈಸಾರಿ ಬಳಿಯ ತೋಟವೊಂದರಲ್ಲಿ 18 ವರ್ಷ ಪ್ರಾಯದ ಹೆಣ್ಣಾನೆಯ ಕಳೇಬರವು ಗುರುವಾರ ಪತ್ತೆಯಾಗಿದೆ.
ಕಾಡಾನೆಗಳ ನಡುವಿನ ಕಾದಾಟದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಜೂನ್ 25ರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ.
ಮಡಿಕೇರಿ ಡಿಎಸ್‌ಎಫ್ ಹರ್ಷವರ್ಧನ, ಕುಶಾಲನಗರ ಎಸಿಎಫ್ ಗೋಪಾಲ್, ಆರ್‌ಎಫ್‌ಓ ರತನ್ ಭೇಟಿ ನೀಡಿದ್ದರು. ಮರಣೋತ್ತರ ಪರೀಕ್ಷೆ ನಂತರ ಆನೆಕಾಡು ಮೀಸಲು ಅರಣ್ಯಕ್ಕೆ ಮೃತದೇಹವನ್ನು ಸಾಗಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.