ADVERTISEMENT

ಮಡಿಕೇರಿಯಲ್ಲಿ ಮೊಸರು ಕುಡಿಕೆ ಒಡೆಯುವ ಸಂಭ್ರಮ

ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ನೀರಿನಲ್ಲಿ ಓಕುಳಿಯಾಡಿ ಕೃಷ್ಣನ ಲೀಲೆಗಳನ್ನು ನೆನಪಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 16:40 IST
Last Updated 1 ಸೆಪ್ಟೆಂಬರ್ 2024, 16:40 IST
ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು
ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು   

ಮಡಿಕೇರಿ: ಇಲ್ಲಿನ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಮಕ್ಕಳ ಛದ್ಮವೇಷ ಸ್ಪರ್ಧೆಗಳು ಭಾನುವಾರ ನಡೆದವು. ಯುವಕರ ಓಕುಳಿಯಾಟ ಎಲ್ಲರನ್ನೂ ಸಂಭ್ರಮದಲ್ಲಿ ತೇಲುವಂತೆ ಮಾಡಿತು.

ಬೀಳುತ್ತಿದ್ದ ಮಳೆಯ ನಡುವೆ ಯುವಕರ ಓಕುಳಿಯಾಟ ಕಾರ್ಯಕ್ರಮಕ್ಕೆ ರಂಗು ತುಂಬಿತು. ವಿವಿಧ ವಾದ್ಯಗಳ ನಿನಾದ ಮೆರುಗು ತುಂಬಿತು. ಇವುಗಳ ಮಧ್ಯೆ ಸಂತೋಷ್ ಮತ್ತು ಮಹೇಶ್ ಅವರು ಮೊಸರು ಕುಡಿಕೆ ಒಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

32ಕ್ಕೂ ಅಧಿಕ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪೂನಂ ಸುನಿಲ್, ಸುನಿತಾ ಸುರೇಶ್, ಭಾರತಿ ರಮೇಶ್ ಅವರು ತೀರ್ಪುಗಾರರಾಗಿ ಪಾಲ್ಗೊಂಡರು.

ADVERTISEMENT

ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷರಾದ ರವಿಕುಮಾರ್, ಜಿ.ಜಿ.ಬಾಲಕೃಷ್ಣ, ಅಧ್ಯಕ್ಷ ಪವನ್, ಮುಖಂಡರಾಧ ರಘುರಾಮ್, ಅರುಣ್ ಕುಮಾರ್, ದೀಪ್ತಿ ಬಾಲಕೃಷ್ಣ ಸೇರಿದಂತೆ ಸಮಿತಿ ಸದಸ್ಯರು ಹಾಗೂ ನೂರಾರು ಮಂದಿ ಭಾಗಿಯಾಗಿದ್ದರು.

ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು
ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.