ADVERTISEMENT

ಸೋಮವಾರಪೇಟೆ: ಬೈಕ್‌ನಲ್ಲಿ ವ್ಹೀಲಿ ಮಾಡಿದ ಯುವಕನಿಗೆ ₹ 18,500 ದಂಡ

ಸೋಮವಾರಪೇಟೆ ಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 6:13 IST
Last Updated 23 ಮಾರ್ಚ್ 2025, 6:13 IST
ವ್ಹೀಲಿ 
ವ್ಹೀಲಿ    

ಸೋಮವಾರಪೇಟೆ: ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಯುವಕನೊಬ್ಬನಿಗೆ ₹ 18,500 ದಂಡ ವಿಧಿಸಿದ್ದಾರೆ.

ಕಾಲೇಜೊಂದರ ಬಳಿ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಾ, ಅಜಾಗರೂಕತೆಯ ಚಾಲನೆಯೊಂದಿಗೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೈಕ್ ಓಡಿಸುತ್ತಿದ್ದ ಯುವಕನನ್ನು ಬೆನ್ನಟ್ಟಿದ ಪೊಲೀಸರು, ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಬೈಕ್‌ನಲ್ಲಿ ಅಗತ್ಯ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ. ಒಟ್ಟಾರೆ ಎಲ್ಲ ನಿಯಮಗಳ ಉಲ್ಲಂಘನೆಗೆ ₹ 18,500 ದಂಡ ವಿಧಿಸಿದರು.

ಈ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಕಿರಿಕಿರಿ ತೋರುವ ಪುಂಡರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ADVERTISEMENT

ಕಾಲೇಜು ಸಮಯದ ಮುಗಿಯುವ ವೇಳೆ ಬೈಕ್‌ನಲ್ಲಿ ಕೆಲವು ಪುಂಡರು ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಅಡ್ಡಾದಿಡ್ಡಿ ಬೈಕ್ ಓಡಿಸುವುದು, ತ್ರಿಬಲ್ ರೈಡಿಂಗ್, ಸೈಲೆನ್ಸರ್‌ನಿಂದ ಕರ್ಕಶ ಶಬ್ದ ಹೊರಹಾಕುವುದು, ಹೆಲ್ಮೆಟ್ ಧರಿಸದೇ ಅತ್ತಿಂದಿತ್ತ, ಇತ್ತಿಂದಿತ್ತ ಅಡ್ಡಾಡುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಗೊಂಡಿದ್ದು, ಈ ಬಗ್ಗೆ ಹಲವು ಸಭೆಗಳಲ್ಲಿಯೂ ಪ್ರಸ್ತಾಪವಾಗಿತ್ತು.

ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿಯೂ ಪೊಲೀಸ್ ಇಲಾಖೆಯನ್ನು ಜನಪ್ರತಿನಿಧಿಗಳು ಒತ್ತಾಯಿಸಿದ್ದರು.

ಸೋಮವಾರಪೇಟೆ ಪೊಲೀಸರು ಇಂತಹ ಪುಂಡರ ಮೇಲೆ ನಿಗಾ ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.