ADVERTISEMENT

ಗ್ರಾಮಸ್ಥರಿಂದ ಶಾಲೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 3 ಮೇ 2011, 7:15 IST
Last Updated 3 ಮೇ 2011, 7:15 IST

ಮುಳಬಾಗಲು: ತಾಲ್ಲೂಕಿನ ತಾಯಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಉಪ ಮುಖ್ಯ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು  ಆರೋಪಿಸಿ ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಉಪ ಮುಖ್ಯಶಿಕ್ಷಕರಾದ ಸಿಂಗಾಗೋಳ ಅವರು ಡಿಸೆಂಬರ್ 2010 ರಿಂದ ಶಾಲೆಗೆ ಸರಿಯಾಗಿ ಬಂದಿಲ್ಲ.ಆದರೂ ವೇತನ ಮಾತ್ರ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.  ಪೋಷಕರು ಅನೇಕ ಬಾರಿ ಶಾಲೆಗೆ ಭೇಟಿ ನೀಡಿ ಗೈರು ಹಾಜರಾತಿ ಬಗ್ಗೆ ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಲಿಖಿತ ದೂರು  ಸಲ್ಲಿಸಿದ್ದರು  ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಗಡಿ ಭಾಗದ ಹಾಗೂ ರೈತಾಪಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ  ಶಾಲೆಗೆ ಬರುತ್ತಾರೆ. ಆದರೆ ಇಂದಿಗೂ ಕನಿಷ್ಠ ಒಂದು ಪಾಠ ಸಹ ನಡೆದಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಯಲೂರು ಗ್ರಾ.ಪಂ. ಅಧ್ಯಕ್ಷ ತೇಜೋಮೂರ್ತಿ, ಜಿ.ಪಾಪಣ್ಣ, ವಿ.ಶ್ರೀನಿವಾಸ್, ಸೀನಪ್ಪ, ವಿ.ರಮೇಶ್, ಜಿ.ಭುವನೇಶ್ವರ, ಕೆ.ಬಿ.ನಾಗರಾಜ್, ಟಿ.ಎಂ.ರಾಮಚಂದ್ರ, ಟಿ.ಎಸ್.ಹರಿಕೃಷ್ಣ ಪ್ರತಿಭಟನೆಯಲ್ಲಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.