ADVERTISEMENT

ಮತದಾರರ ಚೀಟಿ ಪಡೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 6:10 IST
Last Updated 3 ಮಾರ್ಚ್ 2012, 6:10 IST

ಮುಳಬಾಗಲು: ತಾಲ್ಲೂಕಿನಲ್ಲಿ 1,72, 219 ಮಂದಿ ಮತದಾರರಿದ್ದು ಅವರಲ್ಲಿ 1,56,375 ಮಂದಿ ಮತದಾರರ ಕಾರ್ಡ್ (ಎಪಿಕ್ ಕಾರ್ಡ್) ಪಡೆದಿ ದ್ದಾರೆ.  ಶೇಕಡ 91 ಸಾಧನೆ ಆಗಿದ್ದು, ನೂರರಷ್ಟು ಮಂದಿಗೆ ಎಪಿಕ್ ಕಾರ್ಡ್ ನೀಡಬೇಕು ಎಂದು ತಹಶೀಲ್ದಾರ್ ಪಿ.ಜಯಮಾಧವ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಶುಕ್ರವಾರ ಮತದಾರರಿಗೆ ಕಾರ್ಡ್ ನೀಡುವ ಕುರಿತು ಎಲ್ಲ ಪಕ್ಷಗಳ ಪ್ರತಿನಿಧಿಗಳ, ಪುರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಗ್ರಾಮಾಂತರ ಪ್ರದೇಶಕ್ಕಿಂತಲೂ ಪಟ್ಟಣ ಪ್ರದೇಶದಲ್ಲಿ ಮತದಾರರ ಕಾರ್ಡ್ ಪಡೆಯಬೇಕಾದವರು ಹೆಚ್ಚಿದ್ದಾರೆ.
 
ಅಂದರೆ 9800 ಮಂದಿ ಇದ್ದಾರೆ. ಅಧಿಕಾರಿಗಳು ಮುಂದಿನ ವಾರದಿಂದ ಒಂದು ವಾರ ಕಾಲ ಮನೆ ಮನೆ ಪರಿಶೀಲಿಸುತ್ತಾರೆ. ಮತದಾರ ಪಟ್ಟಿಯಲ್ಲಿ ಹೆಸರಿದ್ದು, ಫೋಟೋ ಇಲ್ಲದಿದ್ದಲ್ಲಿ ಪಟ್ಟಿಯಿಂದ ಹೆಸರು ಕೈಬಿಡಲಾಗುವುದು ಎಂದರು.

ತಾಲ್ಲೂಕು ಪಂಚಾಯತಿ ಅಧಿಕಾರಿ ಡಾ.ವೆಂಕಟಸ್ವಾಮಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಪ್ರಸಾದ್, ಪುರಸಭೆ ಉಪಾ ಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ವಾಜೀದ್, ಮಲ್ಲಿಕಾರ್ಜುನ್, ರೂಪ ಶ್ರೀನಿವಾಸ್, ಮುಖ್ಯಾಧಿಕಾರಿ ಪಿ. ಅಶೋಕ್‌ಕುಮಾರ್, ಶ್ಯಾಮಸುಂದರ್, ಆರೋಗ್ಯಾಧಿಕಾರಿ ತಾಯಲೂರು ನಾಗ ರಾಜ್, ರಾಜಸ್ವ ನಿರಿಕ್ಷಕ ವೆಂಕಟೇಶಪ್ಪ, ಮಲ್ಲೆಕುಪ್ಪ ವಿಜಯಕುಮಾರ್, ದತ್ತಾತ್ರೇಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.