
ಪ್ರಜಾವಾಣಿ ವಾರ್ತೆಕೆಜಿಎಫ್: ಶಾಲೆಯಲ್ಲಿ ಚೇಷ್ಟೆ ಮಾಡಿದ್ದಕ್ಕೆ ಪೋಷಕರು, ಶಿಕ್ಷಕರು ಗದರಿಸಿದ್ದರಿಂದ ನೊಂದ 14 ವರ್ಷದ ವಿದ್ಯಾರ್ಥಿ ಊರಿಗಾಂ ರೈಲ್ವೆ ನಿಲ್ದಾಣದ ಬಳಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಬರ್ಟಸನ್‌ಪೇಟೆ ಖಾಸಗಿ ಶಾಲೆಯ 9ನೇ ತರಗತಿಯ ಗೌತಮ್ (14) ಮೃತ ವಿದ್ಯಾರ್ಥಿ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲೆಯಲ್ಲಿ ವಿದ್ಯುತ್ ಪರಿಕರಗಳಿದ್ದ ಕಡೆ ವಿದ್ಯಾರ್ಥಿ ಚೇಷ್ಟೆ ಮಾಡುತ್ತಿದ್ದ. ಪೋಷಕರನ್ನು ಕರೆಸಿದ್ದ ಪ್ರಾಂಶುಪಾಲರು ಅವರ ಮುಂದೆ ಸೋಮವಾರ ಗೌತಮ್‌ನಿಗೆ ಗದರಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.