ADVERTISEMENT

ಬಜರಂಗದಳ, ವಿಎಚ್‌ಪಿ ಆಯೋಜನೆಯ ಗಣಪನಿಗೆ ಅಕ್ಬರ್‌ ಗಾನ‌!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 14:05 IST
Last Updated 21 ಸೆಪ್ಟೆಂಬರ್ 2023, 14:05 IST
ಕೋಲಾರದಲ್ಲಿ ನಡೆದ ಗಣೇಶೋತ್ಸವದಲ್ಲಿ ಗಾಯಕ ಅಕ್ಬರ್‌ ಜೊತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಡು ಹಾಡಿದರು
ಕೋಲಾರದಲ್ಲಿ ನಡೆದ ಗಣೇಶೋತ್ಸವದಲ್ಲಿ ಗಾಯಕ ಅಕ್ಬರ್‌ ಜೊತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಡು ಹಾಡಿದರು    

ಕೋಲಾರ: ನಗರದ ಎಂ.ಜಿ.ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಈ ಬಾರಿ ಹಲವು ಕಾರಣಗಳಿಂದಾಗಿ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಲೋಕಮಾನ್ಯ ತಿಲಕ್‌ ವಿನಾಯಕರ ವಿಸರ್ಜನಾ ಸಮಿತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಮೂರು ದಿನ ಪೂಜಿಸಿ ನಂತರ ವಿಸರ್ಜನೆ ಮಾಡುವುದು ವಾಡಿಕೆ.

ಈ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಜನರನ್ನು ರಂಜಿಸಿ, ಗಣೇಶನಿಗೆ ವಂದಿಸಲಾಗುತ್ತದೆ. ಈ ವರ್ಷ ಗಣೇಶ ಹಬ್ಬದ ಆಚರಣೆ ವಿಶೇಷವಾಗಿ‌ ಕೋಮು ಸೌಹಾರ್ದ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ADVERTISEMENT

ಖ್ಯಾತ ಹಿನ್ನೆಲೆ ಗಾಯಕ ಹಾಗೂ ಹಾಡುಗಾರ ಅಕ್ಬರ್‌ ಅವರು ಕಾರ್ಯಕ್ರಮ ನೀಡಿದರು. ಅವರ ಗಾನಸುಧೆ ಎಲ್ಲರನ್ನು ಮಂತ್ರಮುಗ್ದಗೊಳಿಸಿತು. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಡಾಗನಪಲ್ಲಿ ಗ್ರಾಮದ ಅಕ್ಬರ್‌ ಸಂಗೀತ ಲೋಕದ ದಂತಕತೆ ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ಶಿಷ್ಯ ಕೂಡ.

ವಿಶೇಷವೆಂದರೆ ಅಕ್ಬರ್‌ ಜೊತೆ ಈ ಬಾರಿ ವೇದಿಕೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಕೂಡ ದನಿಗೂಡಿಸಿದರು. ತೆಲುಗಿನ ಕೂಲಿ ಸಿನಿಮಾದಲ್ಲಿರುವ ಗಣೇಶನ ಕುರಿತಾದ ದಂಡಾಲಯ್ಯ, ಉಂಡಾಲಯ್ಯ ಎನ್ನುವ ಹಾಡು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.