ADVERTISEMENT

ಮುಳಬಾಗಿಲು: ಕೊರೊನಾ ವಾರಿಯರ್ಸ್‌ ಸೇವೆಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 4:55 IST
Last Updated 23 ಜುಲೈ 2021, 4:55 IST
ಮುಳಬಾಗಿಲು ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್, ಮಾನವ ಹಕ್ಕು ಹೋರಾಟಗಾರರ ಪರಿಷತ್ ವತಿಯಿಂದ ಗುರುವಾರ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಸಮಾರಂಭ ನಡೆಯಿತು
ಮುಳಬಾಗಿಲು ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್, ಮಾನವ ಹಕ್ಕು ಹೋರಾಟಗಾರರ ಪರಿಷತ್ ವತಿಯಿಂದ ಗುರುವಾರ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಸಮಾರಂಭ ನಡೆಯಿತು   

ಮುಳಬಾಗಿಲು: ಕೊರೊನಾ ಸಂದರ್ಭದಲ್ಲಿ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಪೊಲೀಸರು ಸೇರಿದಂತೆ ಇತರೇ ಇಲಾಖೆಯ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕೊರೊನಾ ವಾರಿಯರ್ಸ್‌ ಆಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ ಹೇಳಿದರು.

ನಗರದ ಡಿವಿಜಿ ಕನ್ನಡ ಗಡಿ ಭವನದಲ್ಲಿ ಪ್ರಗತಿ ಚಾರಿಟಬಲ್ ಟ್ರಸ್ಟ್, ಮಾನವ ಹಕ್ಕು ಹೋರಾಟಗಾರರ ಪರಿಷತ್‌ನಿಂದ ಗುರುವಾರ ಏರ್ಪಡಿಸಲಾಗಿದ್ದ ಕೊರೊನಾ ವಾರಿಯರ್ಸ್‌ಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೂರನೇ ಅಲೆ ಚಿಕ್ಕಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಹಾಗಾಗಿ, ಮಕ್ಕಳನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಕೋರಿದರು.

ADVERTISEMENT

ಕೊರೊನಾ ವಾರಿಯರ್ಸ್‌ ಗಳಾದ ಡಾ.ಭಾರತಿ, ಡಾ.ವೇಣುಗೋಪಾಲ್, ಡಾ.ಹರೀಶ್, ತಾಯಲೂರು ಡಾ.ರಾಕೇಶ್, ಕಾನ್‌ಸ್ಟೆಬಲ್‌ ಶಂಕರ್, ಪತ್ರಕರ್ತ ಕೆ. ಪ್ರಕಾಶ್, ಮಾಲೂರಿನ ಡಾ.ವಸಂತ್ ಕುಮಾರ್, ಡಾ.ಸುರೇಶ್ ವಿ., ಎಸ್. ಅಭಿಲಾಷ್, ಕೆಜಿಎಫ್‌ನ ಡಾ.ವಿಜಯ್ ಕುಮಾರ್, ಕಾರ್ಮಿಕ ಮುಖಂಡ ಎಸ್. ಬಾಬು, ಶ್ರೀನಿವಾಸಪುರದ ಡಾ.ವೆಂಕಟಾಚಲ, ಬಂಗಾರಪೇಟೆ ಡಾ.ಹರಿಕೃಷ್ಣ, ಜಿಲ್ಲಾ ನಿವೃತ್ತ ಡಿಎಚ್ಒ ಸುರೇಶ್ ಚಲ್ಲಿಕೆರೆ, ಲಯನ್ ನಂದ, ಕಮಲ್ ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಮುನೇಶ್, ಗುಜ್ಜನಹಳ್ಳಿ ಮಂಜುನಾಥ್, ಕಾರ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣ, ನಾಗರಾಜರೆಡ್ಡಿ, ಜಬೀಉಲ್ಲಾ, ವೆಂಕಟ್ರಾಮರೆಡ್ಡಿ, ರಂಗಪ್ಪ, ರಾಧಾಕೃಷ್ಣ, ವಿವೇಕಾನಂದ, ಲಕ್ಷ್ಮಯ್ಯ, ಮಾನವ ಹಕ್ಕುಗಳ ಹೋರಾಟಗಾರರ ಪರಿಷತ್ ಅಧ್ಯಕ್ಷ ಮನೀಶ್ ಸೂರ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.