ADVERTISEMENT

40 ಗಂಟೆಯಲ್ಲಿ ಬಿಎಡ್‌ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:19 IST
Last Updated 23 ನವೆಂಬರ್ 2020, 19:19 IST

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಬಿಎಡ್ ಪರೀಕ್ಷೆ ಮುಗಿದ 40 ಗಂಟೆಗಳಲ್ಲಿ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ಬರೆದಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜನಾರ್ಧನಂ ತಿಳಿಸಿದ್ದಾರೆ.

‘ಉತ್ತರ ವಿವಿಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್, ಆಡಳಿತ ವಿಭಾಗದ ಕುಲಸಚಿವ ಡಾ.ವೆಂಕಟೇಶಮೂರ್ತಿ ಹಾಗೂ ಮೌಲ್ಯಮಾಪನ ಕುಲಸಚಿವರ ನೇತೃತ್ವದಲ್ಲಿ ಈ ಬಾರಿ 2019-20ನೇ ಸಾಲಿನ ಬ್ಯಾಕ್ಲಾಗ್ 2ನೇ ಸೆಮಿಸ್ಟರ್ ಪರೀಕ್ಷೆ ಹಾಗೂ 4ನೇ ಸೆಮಿಸ್ಟರ್ ಬಿಎಡ್ ಪರೀಕ್ಷೆಗಳನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಿ, ಯಾವುದೇ ಗೊಂದಲ, ಅಡಚಣೆಗಳಿಲ್ಲದೇ ಪೂರ್ಣಗೊಳಿಸಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ನ.21ರವರೆಗೂ ಬಿಎಡ್ ತಾತ್ವಿಕ, ಪ್ರಾಯೋಗಿಕ ಪರೀಕ್ಷೆಗಳು ನಡೆಯಿತು. ನ.11ರಿಂದ 23ರವರೆಗೂ ಮೌಲ್ಯಮಾಪನ ನಡೆಸಿ, ಮೊದಲ ಬಾರಿಗೆ ಪರೀಕ್ಷೆ ಮುಗಿದ 40 ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ADVERTISEMENT

4ನೇ ಸೆಮಿಸ್ಟರ್‌ನಲ್ಲಿ 1,929 ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡಿದ್ದು, 1,829 ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 94.71 ಫಲಿತಾಂಶ ಬಂದಿದೆ. ಒಂದನೇ ಸೆಮಿಸ್ಟರ್ ಅಂಕಪಟ್ಟಿಯನ್ನೂ ಇದೇ ಸಂದರ್ಭ ವಿತರಿಸಲಾಯಿತು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.