
ಬೇತಮಂಗಲ ಸಮೀಪದ ರಾಮಸಾಗರ ಗ್ರಾಮದ ಬಸ್ ನಿಲ್ದಾಣದ ತಂಗುದಾಣದ ಸ್ಥಿತಿ
ಬೇತಮಂಗಲ: ಸಮೀಪದ ರಾಮಸಾಗರ ಗ್ರಾಮದ ಬಸ್ ನಿಲ್ದಾಣವು ಸಾರ್ವಜನಿಕರ ಬಳಕೆಗೆ ಬಾರದಂತಾಗಿದ್ದು, ಕುಡುಕರು ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಂಸದರ ನಿಧಿಯಡಿ ಸಾರ್ವಜನಿಕರ ಅನುಕೂಲಕ್ಕಾಗಿ 20 ವರ್ಷಗಳ ಹಿಂದೆ ನಿರ್ಮಾಣವಾದ ತಂಗುದಾಣವು ಕುಡುಕರ ಆಶ್ರಯ ತಾಣವಾಗಿದೆ.
ತಂಗುದಾಣದ ಒಳಗೆ ಮದ್ಯದ ಬಾಟಲಿ, ಸಿಗರೇಟ್ ತುಂಡು ಹಾಗೂ ಕಸದ ರಾಶಿ ಬಿದ್ದಿದ್ದು, ಯಾರೂ ಕುಳಿತುಕೊಳ್ಳಲು ಸಾಧ್ಯವಾಗದೆ, ಸಾರ್ವಜನಿಕರು ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯುತ್ತಾರೆ.
ರಾತ್ರಿ ವೇಳೆಯಷ್ಟೇ ಅಲ್ಲದೆ ಹಗಲಿನಲ್ಲಿಯೂ ಮದ್ಯಪಾನ ಮತ್ತು ಧೂಮಪಾನ ತಂಗುದಾಣದಲ್ಲಿ ನಡೆಯುತ್ತಿದ್ದು, ಮಹಿಳೆಯರು ಒಬ್ಬೊಬ್ಬರೇ ಓಡಾಡಲು ಭಯಪಡುವಂತಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.