
ಪ್ರಜಾವಾಣಿ ವಾರ್ತೆ
ಬೇತಮಂಗಲ: ಬಂಗಾರು ತಿರುಪತಿ (ಗುಟ್ಟಹಳ್ಳಿ)ಯ ಅಲುವೇಲು ಮಂಗಮ್ಮ ಸಮೇತ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಜ.26 ರಿಂದ ಫೆ.4ರವರೆಗೆ ನಡೆಯಲಿದೆ.
26 ರಂದು ರಥೋತ್ಸವ ಪ್ರಾರಂಭವಾಗಲಿದ್ದು, ಪ್ರತಿನಿತ್ಯ ಉತ್ಸವಗಳು ನಡೆಯಲಿದೆ. ಜ.26 ರಂದು ಅಂಕುರಾರ್ಪಣೆ, ಧ್ವಜಾರೋಹಣೋತ್ಸವ, ಜ.27 ರಂದು ಸಿಂಹ ವಾಹನೋತ್ಸವ, ಜ.28 ರಂದು ಹನುಮಂತ ವಾಹನೋತ್ಸವ, ಜ.29 ರಂದು ಶೇಷ ವಾಹನೋತ್ಸವ, ಜ.30 ರಂದು ಗಜ ವಾಹನೋತ್ಸವ, ಜ.31 ರಂದು ಗರುಡ ವಾಹನೋತ್ಸವ, ತೆಪ್ಪೋತ್ಸವ, ರಾತ್ರಿ 9ಕ್ಕೆ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವ, ಫೆ.1 ರಂದು ಬ್ರಹ್ಮರಥೋತ್ಸವ, ಫೆ.2 ರಂದು ಪಾರ್ವಟೋತ್ಸವ, ಫೆ.3 ರಂದು ವಸಂತೋತ್ಸವ, ಶಯನೋತ್ಸವ, ಫೆ.4 ರಂದು ಪುಷ್ಪಯಾನೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.