
ಪ್ರಜಾವಾಣಿ ವಾರ್ತೆಮುಳಬಾಗಿಲು: ಬಹಿರ್ದೆಸೆಗೆಂದು ಹೋಗಿದ್ದ ವ್ಯಕ್ತಿಯಿಂದ ಅಪರಿಚಿತರು ₹67 ಸಾವಿರ ಹಾಗೂ ಒಂದು ಬಂಗಾರದ ಉಂಗುರವನ್ನು ಭಾನುವಾರ ರಾತ್ರಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮುಳಬಾಗಿಲು ನಗರದ ಅಮರಜ್ಯೋತಿ ಬಡಾವಣೆಯ ಬಾಲಸುಬ್ರಹ್ಮಣ್ಯಂ ದರೋಡೆಗೆ ಒಳಗಾದವರು. ಬಾಲಸುಬ್ರಹ್ಮಣ್ಯಂ ಭಾನುವಾರ ರಾತ್ರಿ ನಗರದ ಪ್ರವಾಸಿ ಮಂದಿರದ ಬಳಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದಾಗ ಯಾರೊ ಇಬ್ಬರು ಅಪರಿಚಿತರು ಬೆದರಿಸಿ ನಗದು ಹಾಗೂ ₹30 ಸಾವಿರ ಬೆಲೆ ಬಾಳುವ ಬಂಗಾರದ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.