ಶ್ರೀನಿವಾಸಪುರ: ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಪುತ್ರ ಹರ್ಷ ಕನಡಂ ಅವರಿಗೆ ಎಐಸಿಸಿ ಹೊಸ ಜಬಾಬ್ದಾರಿ ನೀಡಿದೆ.
ಅವರನ್ನು ಕೇರಳ ರಾಜ್ಯ ಕಾಂಗ್ರೆಸ್‌ನ ವಾರ ರೂಂ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವು ಸಂಘಟನೆ ಬಲವರ್ಧನೆ ಹಾಗೂ ಚುನಾವಣಾ ತಂತ್ರ ರೂಪಿಸುವ ಕಾರ್ಯಗಳಿಗೆ ವೇಗ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ.
ಪಕ್ಷದ ಯುವ ನಾಯಕರಾಗಿರುವ ಹರ್ಷ, ಸಂಘಟನಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಚುನಾವಣಾ ತಂತ್ರ ರೂಪಿಸುವಲ್ಲಿ ಹಾಗೂ ಆಂತರಿಕ ಸಂಘಟನಾ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಜವಾಬ್ದಾರಿಯೊಂದಿಗೆ ರಾಜಕೀಯ ಪ್ರವೇಶಕ್ಕೂ ಹಾದಿ ಮಾಡಿಕೊಟ್ಟಂತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅ. 7ರಂದು ಈ ಘೋಷಣೆ ಮಾಡಿದ್ದಾರೆ. ವಾರ ರೂಂ ಘಟಕವು ಪಕ್ಷದ ಚುನಾವಣಾ ತಂತ್ರ ರೂಪಿಸುವುದು, ಪ್ರಚಾರ ಅಭಿಯಾನಗಳ ಯೋಜನೆ, ಸಾಮಾಜಿಕ ಮಾಧ್ಯಮ ತಂತ್ರ ಸಿದ್ಧತೆ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಸಂಪರ್ಕ ವ್ಯವಸ್ಥೆಗಳನ್ನು ಸಮನ್ವಯಗೊಳಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.