ಕಾಂಗ್ರೆಸ್
ಮಾಲೂರು: ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಪಕ್ಷ ಸಂಘಟಿಸುವ ಕೆಲಸದಲ್ಲಿ ತೊಡಗಿರುವ ಕಟ್ಟ ಕಡೆಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುವುದು ಶಾಸಕ ಕೆ.ವೈ.ನಂಜೇಗೌಡ ಎಂದು ತಿಳಿಸಿದರು.
ನಗರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ನಡೆದ ನೂತನ ಅಧ್ಯಕ್ಷ ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ಗ್ರಾಮ ಪಂಚಾಯಿತಿ ಸದಸ್ಯನಿಂದ ರಾಜಕಾರಣ ಪ್ರಾರಂಭಿಸಿದ್ದೇನೆ. ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಜನರ ಆರ್ಶೀವಾದದಿಂದ ಎರಡು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ₹2,500 ಸಾವಿರ ಕೋಟಿ ಅನುದಾನ ತರಲಾಗಿದೆ’ ಎಂದರು.
ಅವಕಾಶ ಸಿಗದ ಕಾರ್ಯಕರ್ತರು ಬೇಸರ ಪಡುವ ಅಗತ್ಯವಿಲ್ಲ. ಮುಂಬರುವ ದಿನಗಳಲ್ಲಿ ಅವರಿಗೂ ಅವಕಾಶಗಳು ಸಿಗುತ್ತವೆ ಎಂದರು.
ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಚ್.ಎಂ. ವಿಜಯ ನರಸಿಂಹ, ಸದಸ್ಯರಾಗಿ ಭಾಸ್ಕರ್, ಶಬೀರ್, ಅಂಬರೀಶ್ ಅಧಿಕಾರ ಸ್ವೀಕರಿಸಿದರು.
ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿ ನಾರಾಯಣ್, ಮಹಮ್ಮದ್ ನಹಿಮೂಲ್ಲಾ, ಎಂ.ಕೃಷ್ಣಪ್ಪ, ರಾಮಮೂರ್ತಿ, ಸೋಮಣ್ಣ, ಹನುಮಂತಪ್ಪ, ನಾರಾಯಣಸ್ವಾಮಿ, ಕೆ.ಎಚ್.ಚನ್ನರಾಯಪ್ಪ, ಇಂತಿಯಾಜ್, ಆರ್.ವೆಂಕಟೇಶ್, ಮುರಳಿಧರ್, ಪರಮೇಶ್, ಭವ್ಯ, ವೆಂಕಟೇಶ್, ನಲಂಡಳ್ಳಿ ನಾಗರಾಜ್, ಅಂಜಿನಪ್ಪ, ಎಂ.ವಿ.ಹನುಮಂತಪ್ಪ, ವೀರಭದ್ರಪ್ಪ, ಸಂಪಂಗೆರೆ ಮುನಿರಾಜು ಅಶ್ವಥ್ ರೆಡ್ಡಿ, ನಾಗಪುರ ನವೀನ್, ವಸಂತ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.