ADVERTISEMENT

ರಾಜಕೀಯವಾಗಿ ಬೆಳೆಯಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 16:02 IST
Last Updated 1 ಅಕ್ಟೋಬರ್ 2019, 16:02 IST

ಕೋಲಾರ: ‘ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ದಾನ ಧರ್ಮದ ಗುಣಗಳನ್ನು ಹೊಂದಿರಬೇಕು. ಆದರೆ, ಅದನ್ನು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಬಿಬಿಎಂಪಿ ಮಾಜಿ ಸದಸ್ಯ ಶ್ರೀಧರ್‌ರೆಡ್ಡಿ ತಿಳಿಸಿದರು.

ನಗರದ ಗಾಂಧಿನಗರದಲ್ಲಿನ ಓಂಶಕ್ತಿ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ₨ 25 ಸಾವಿರ ಆರ್ಥಿಕ ನೆರವು ನೀಡಿ ಮಾತನಾಡಿ, ‘ದೇವಾಲಯಗಳಿಗೆ ಹೋಗುವುದರಿಂದ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಅಂತಹ ವಾತಾವರಣ ಅಲ್ಲಿ ನೆಲೆಸಿದೆ. ಸಾಕಷ್ಟು ದೇವಾಲಯಗಳು ಅಭಿವೃದ್ಧಿ ಇಲ್ಲದಾಗಿದ್ದು, ಸಮಾಜ ಸೇವಕರು ಅವುಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದರು.

‘ವಿಧಾನಸಭಾ ಕ್ಷೇತ್ರದಲ್ಲಿ ನಾನು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬೆಳೆಯಲು ತೀರ್ಮಾನ ಮಾಡಲಾಗಿದ್ದು, ಜನರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ನಾನು ಗಿಮಿಕ್ ರಾಜಕಾರಣಿಯಲ್ಲ. ಹಿಂದಿನವರ ಮೇಲೆ ಆರೋಪ ಮಾಡುವ ಅವಶ್ಯಕತೆಯೂ ನನಗಿಲ್ಲ. ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ, ಅವಕಾಶ ಸಿಕ್ಕಿದರೆ ಅದನ್ನು ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

ಗಾಂಧಿನಗರದ ಮುಖಂಡರಾದ ಅನಿಲ್‌, ರಾಮಣ್ಣ, ನಾರಾಯಣಸ್ವಾಮಿ, ಲಕ್ಷ್ಮೀಪತಿ, ಗುಣಶೇಖರ್, ಸೋಮಣ್ಣ, ಕೃಷ್ಣ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.