ADVERTISEMENT

ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ: ಕೆ.ವಿ.ಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 11:53 IST
Last Updated 6 ಆಗಸ್ಟ್ 2020, 11:53 IST
ರೋಟರಿ ಕೋಲಾರ ನಂದಿನಿ ಸೇವಾ ಸಂಸ್ಥೆ ಸದಸ್ಯರಿಗೆ ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಶಿಬಿರವನ್ನು ಭಾರತ್ ಸ್ಕೌಟ್ಸ್- ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಉದ್ಘಾಟಿಸಿದರು.
ರೋಟರಿ ಕೋಲಾರ ನಂದಿನಿ ಸೇವಾ ಸಂಸ್ಥೆ ಸದಸ್ಯರಿಗೆ ಕೋಲಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಶಿಬಿರವನ್ನು ಭಾರತ್ ಸ್ಕೌಟ್ಸ್- ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಉದ್ಘಾಟಿಸಿದರು.   

ಕೋಲಾರ: ‘ಸಂಘ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಿಸಬಹುದು’ ಎಂದು ಭಾರತ್ ಸ್ಕೌಟ್ಸ್- ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಅಭಿಪ್ರಾಯಪಟ್ಟರು.

ನೂತನವಾಗಿ ಆರಂಭವಾಗಿರುವ ರೋಟರಿ ಕೋಲಾರ ನಂದಿನಿ ಸೇವಾ ಸಂಸ್ಥೆ ಸದಸ್ಯರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದ್ದು, ಬಡ ಜನರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿಯಿದೆ. ಸ್ಥಿತಿವಂತರು ಬಡ ಜನರಿಗೆ ಸಹಾಯಹಸ್ತ ಚಾಚಬೇಕು’ ಎಂದು ಮನವಿ ಮಾಡಿದರು.

‘ರೋಟರಿ ಸಂಸ್ಥೆಯು ಸೇವಾ ಸಂಸ್ಥೆಯಾಗಿದೆ. ವೈಯಕ್ತಿಕವಾಗಿ ತಮಗೆ ಲಾಭ ಎಂಬುದನ್ನು ತಮ್ಮಿಂದ ಸಮಾಜಕ್ಕೆ ಎಷ್ಟು ಸಹಾಯವಾಯಿತು ಎಂಬ ಆಲೋಚಿಸಬೇಕು. ಸಮಾಜ ಸೇವೆ ಮೂಲಕ ಆತ್ಮತೃಪ್ತಿ ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಶ್ರೀನಿವಾಸಪುರ ರೋಟರಿ ಕ್ಲಬ್ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.

ADVERTISEMENT

ಕಾಮಧೇನು ಮತ್ತು ಕಲ್ಪವೃಕ್ಷ ಯೋಜನೆ ಜಿಲ್ಲಾ ನಿರ್ದೇಶಕ ಸುಧಾಕರ್‌, ಸಂಸ್ಥೆಯ ಮಾರ್ಗದರ್ಶಕ ಕೆ.ಗೋಪಾಲರೆಡ್ಡಿ, ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣಮೂರ್ತಿ, ನಿರ್ದೇಶಕ ರವೀಂದ್ರನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.