ADVERTISEMENT

ಆರೋಗ್ಯ ಸಚಿವ ರಾಜೀನಾಮೆ ನೀಡಲಿ: ಕುಮಾರಸ್ವಾಮಿ    

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 13:55 IST
Last Updated 18 ಸೆಪ್ಟೆಂಬರ್ 2022, 13:55 IST
   

ಕೋಲಾರ: 'ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಗಳು ಏಕೆ ಸತ್ತರು ಎಂಬ ಸತ್ಯ ಹೇಳಲು ಈ ಕೆಟ್ಟ ಸರ್ಕಾರಕ್ಕೆ‌‌ ಇದುವರೆಗೆ ಸಾಧ್ಯವಾಗಿಲ್ಲ. ಮಾನ ಮರ್ಯಾದೆ, ನೈತಿಕತೆ ಇದ್ದರೆ ಇಷ್ಟರೊಳಗೆ ಆರೋಗ್ಯ ಸಚಿವ ರಾಜೀನಾಮೆ ಕೊಡಬೇಕಿತ್ತು. ಕೋವಿಡ್ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ 30 ಜನರ ಜೀವ ಹೋಯಿತು' ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

‘ಸರಿಯಾಗಿ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಇವರಿಗೆ ಸಾಧ್ಯವಾಗಿಲ್ಲ. ಯಾವ ನಂಬಿಕೆ ಮೇಲೆ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಬರಬೇಕು’ ಎಂದು ಭಾನುವಾರ ಇಲ್ಲಿ ಪ್ರಶ್ನಿಸಿದರು.

‘ಶೇ 40 ಕಮಿಷನ್‌ ಸಿಎಂ ಸ್ವಾಗತ ಎಂದು ತೆಲಂಗಾಣದಲ್ಲಿ ಬೋರ್ಡ್‌ ಹಾಕಿರುವುದು ರಾಜ್ಯ ಅಥವಾ ರಾಜ್ಯದ ಜನರಿಗೆ ಮಾಡಿರುವ ಅವಮಾನ ಅಲ್ಲ. ಬಿಜೆಪಿ ಸರ್ಕಾರ ಉದ್ದೇಶಿಸಿ ಹಾಕಿರುವುದು. ಸರ್ಕಾರ ನಡೆಸುವವರು ಇದಕ್ಕೆ ಉತ್ತರ ಕೊಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.