ADVERTISEMENT

ಮುಳಬಾಗಿಲು: ಟೊಮೆಟೊಗೆ ಹೆಚ್ಚಿದ ಬೇಡಿಕೆ, ಬೆಲೆ ಏರಿಳಿತದ ಚದುರಂಗದಾಟ

ಜಿ.ವಿ.ಪುರುಷೋತ್ತಮರಾವ್
Published 25 ಸೆಪ್ಟೆಂಬರ್ 2020, 12:03 IST
Last Updated 25 ಸೆಪ್ಟೆಂಬರ್ 2020, 12:03 IST
ಮುಳಬಾಗಿಲು ತಾಲ್ಲೂಕು ಎನ್. ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆಗೆ ಶುಕ್ರವಾರ ಬಂದ ಟೊಮೆಟೊ ಆವಕ
ಮುಳಬಾಗಿಲು ತಾಲ್ಲೂಕು ಎನ್. ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆಗೆ ಶುಕ್ರವಾರ ಬಂದ ಟೊಮೆಟೊ ಆವಕ   

ಮುಳಬಾಗಿಲು: ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ದರವೂ 15 ಕೆಜಿ ಬಾಕ್ಸ್‌ಗೆ ₹ 400 ರಿಂದ ₹ 450ಕ್ಕೆ ಏರಿಕೆಯಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ಎನ್. ವಡ್ಡಹಳ್ಳಿ ಗ್ರಾಮದ ಆರ್‌ಸಿ ಉಪ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಶುಕ್ರವಾರ 15 ಕೆಜಿ ಬಾಕ್ಸ್‌ಗೆ ₹ 400 ರಿಂದ ₹ 450ಕ್ಕೆ ಏರಿಕೆಯಾಗಿದೆ. ಬುಧವಾರ, ಗುರುವಾರ ₹ 300 ರಿಂದ ₹ 400ಕ್ಕೆ ಮಾರಾಟವಾಗಿತ್ತು. ಕಳೆದ ವಾರ ₹ 850ಕ್ಕೆ ಮಾರಾಟವಾಗಿತ್ತು.

ಶುಕ್ರವಾರ ಮಾರುಕಟ್ಟೆಗೆ 50 ಸಾವಿರ ಬಾಕ್ಸ್ ಟೊಮೆಟೊ ಬಂದಿತ್ತು. ದೆಹಲಿ, ಉತ್ತರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ವಡ್ಡಹಳ್ಳಿ ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ಅಲ್ಲಿ ಇಲ್ಲಿನ ಟೊಮೆಟೊ ಗುಣಮಟ್ಟದಲ್ಲಿ ನಂಬರ್ ಒನ್ಎಂದು ಹೆಸರು ಪಡೆದಿದೆ. ಹೀಗಾಗಿ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಮಳೆ ಕಾರಣ ನಿರೀಕ್ಷೆಯ ಮಟ್ಟದಲ್ಲಿ ಗುಣಮಟ್ಟದ ಟೊಮೆಟೊ ಸರಬರಾಜು ಆಗುತ್ತಿಲ್ಲ ಎನ್ನುತ್ತಾರೆಎಪಿಎಂಸಿ ನಿರ್ದೇಶಕ ನೆಗವಾರ ಸತ್ಯಣ್ಣ.

ADVERTISEMENT

ಎನ್. ವಡ್ಡಹಳ್ಳಿ ಉಪ ಮಾರುಕಟ್ಟೆ ಕೋಲಾರದ ನಂತರ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಹೆಚ್ಚುವರಿ ಜಮೀನು ಮಾರುಕಟ್ಟೆಗೆ ನೀಡಲು ಕೋರಲಾಗಿದೆ. ವಡ್ಡಹಳ್ಳಿ ಉಪಮಾರುಕಟ್ಟೆಯ ಟೊಮೆಟೊ ನಾಟಿ ಹೈಬ್ರಿಡ್‌ಗೆ ಪ್ರಸಿದ್ಧಿ ಹೊಂದಿದೆ. ಅದಕ್ಕೆ ಉತ್ತರ ಭಾರತದ ವರ್ತಕರು ಬಂದು ಖರೀದಿಸುತ್ತಿದ್ದಾರೆ. ಈಗ ಮಳೆಯಿಂದ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಟೊಮೆಟೊ ಬರುತ್ತಿಲ್ಲ. ಸಾವಿರ ಬಾಕ್ಸ್ ಬೆಳೆಯುತ್ತಿದ್ದ ತೋಟದಲ್ಲಿ ತೇವಾಂಶದಿಂದ 700 ಬಾಕ್ಸ್ ಹಣ್ಣು ಹಾಳಾದರೆ 300 ಬಾಕ್ಸ್ ಮಾತ್ರ ಗುಣಮಟ್ಟದ ಹಣ್ಣು ಸಿಗುತ್ತಿದೆ ಎಂದರುರೈತ ಯಲವಹಳ್ಳಿ ಪ್ರಭಾಕರ್.

ಈ ಮಾರುಕಟ್ಟೆ ಪ್ರಾಂಗಣ 4 ಎಕರೆ ವಿಸ್ತೀರ್ಣದಲ್ಲಿದ್ದು ಪ್ರತಿ ನಿತ್ಯ ಹೊರರಾಜ್ಯಗಳಿಂದ 60ಕ್ಕೂ ಹೆಚ್ಚು ಲಾರಿಗಳು ಮಾರುಕಟ್ಟೆಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಸ್ಥಳಾಭಾವ ಉಂಟಾಗಿದೆ. ಸರ್ಕಾರ ಗಮನಹರಿಸಿ ಮಾರುಕಟ್ಟೆ ಅಭಿವೃದ್ಧಿ ಪಡಿಸಿದರೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಾಧ್ಯ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.