ADVERTISEMENT

ಕುರಿಗಾಹಿಗಳಿಗೆ ವಿಮಾ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 30 ಮೇ 2022, 4:42 IST
Last Updated 30 ಮೇ 2022, 4:42 IST
ಶ್ರೀನಿವಾಸಪುರ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಭಾನುವಾರ ರೌಂಡ್ ಟೇಬಲ್ ಇಂಡಿಯಾ ಅಧ್ಯಕ್ಷೆ ಅನುಪಮ ಅಗರ್‌ವಾಲ್ ಉದ್ಘಾಟಿಸಿದರು 
ಶ್ರೀನಿವಾಸಪುರ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಭಾನುವಾರ ರೌಂಡ್ ಟೇಬಲ್ ಇಂಡಿಯಾ ಅಧ್ಯಕ್ಷೆ ಅನುಪಮ ಅಗರ್‌ವಾಲ್ ಉದ್ಘಾಟಿಸಿದರು    

ಕೋಲಾರ: ವಿಮಾ ಸೌಲಭ್ಯಕ್ಕೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಕುರಿ ಅಥವಾ ಮೇಕೆ ಸಾಕಾಣಿಕೆದಾರರರು, ವಲಸೆ ಕುರಿಗಾರರು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ₹ 5 ಲಕ್ಷ ವಿಮಾ ಸೌಲಭ್ಯ ನೀಡಲಾಗುತ್ತದೆ. ಕನಿಷ್ಠ 30 ಕುರಿ ಅಥವಾ ಮೇಕೆ ಹೊಂದಿರುವ 18ರಿಂದ 70 ವರ್ಷ ವಯಸ್ಸಿನ ವಲಸೆ ಕುರಿಗಾರರು ಮತ್ತು ಇತರೆ ಕುರಿಗಾರರು ಅರ್ಜಿ ಸಲ್ಲಿಸಬಹುದು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ಯೋಜನೆ ಜಿಲ್ಲಾ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು ಅಥವಾ ಯೋಜನೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆ ಪತ್ರಗಳೊಂದಿಗೆ ಮೇ 30ರೊಳಗೆ ಸಲ್ಲಿಸಬೇಕು. ವಲಸೆ ಕುರಿಗಾಹಿ ಕುಟುಂಬದ ಗರಿಷ್ಠ ನಾಲ್ಕು ಸದಸ್ಯರು ಹಾಗೂ ಇತರೆ ಕುರಿಗಾಹಿ ಕುಟುಂಬದ ಒಬ್ಬ ಸದಸ್ಯರು ವಿಮಾ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

ADVERTISEMENT

ವಲಸೆ ಕುರಿಗಾಹಿ ಕುಟುಂಬದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 96633 81941 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.