ADVERTISEMENT

ಉದ್ಯೋಗ ಮೇಳ: 85 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 8:01 IST
Last Updated 28 ಜುಲೈ 2025, 8:01 IST
ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಭಾನುವಾರ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಉದ್ಯೋಗಾಂಕ್ಷಿಗಳು
ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಭಾನುವಾರ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಉದ್ಯೋಗಾಂಕ್ಷಿಗಳು    

ಕೋಲಾರ: ನಗರ ಹೊರವಲಯದ ಸಹ್ಯಾದಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಉದ್ಯೋಗಾಂಕ್ಷಿಗಳು ಪಾಲ್ಗೊಂಡಿದ್ದು, 85 ಉದ್ಯೋಗಾಂಕ್ಷಿಗಳು ಮೌಖಿಕ ಸಂದರ್ಶನ ಎದುರಿಸಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಬಹುರಾಷ್ಟ್ರೀಯ ಜೈವಿಕ ತಂತ್ರಜ್ಞಾನದ ಕಂಪನಿ ಬಯೋಕಾನ್ ಸಂಸ್ಥೆ ನೇತೃತ್ವದಲ್ಲಿ ಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ ಡಿಪ್ಲೊಮಾ ಕೆಮಿಕಲ್‌ ಎಂಜಿನಿಯರಿಂಗ್‌/ಬಿ.ಎಸ್ಸಿ/ಎಂ.ಎಸ್ಸಿ (ರಸಾಯನ ವಿಜ್ಞಾಮ) ವಿಭಾಗದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯನ್ನು 2023, 2024 ಹಾಗೂ 2025ನೇ ಸಾಲಿನಲ್ಲಿ ಪೂರೈಸಿರುವ ಉದ್ಯೋಗಾಂಕ್ಷಿಗಳು ಪಾಲ್ಗೊಂಡಿದ್ದರು. ಸಂಸ್ಥೆಯ ಅಧಿಕಾರಿಗಳು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಒಳಪಡಿಸಿದರು.

ಮೇಳಕ್ಕೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಉದಯ್ ಕುಮಾರ್ ಚಾಲನೆ ನೀಡಿದರು.

ADVERTISEMENT

‘ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗದ ಅವಶ್ಯ ತೀರಾ ಅನಿವಾರ್ಯವಾಗಿದೆ. ಈ ರೀತಿ ಉದ್ಯೋಗ ಮೇಳವನ್ನು ಆಯೋಜಿಸಿದಾಗ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

‘ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಪ್ರತಿ ವರ್ಷವೂ ಆಯೋಜನೆ ಮಾಡಲಾಗುವುದು. ಕಳೆದ ಬಾರಿ ನಡೆದ ಬಯೋಕಾನ್ ಉದ್ಯೋಗ ಮೇಳದಲ್ಲಿ 95 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಉದ್ಯೋಗವನ್ನು ಪಡೆದಿದ್ದರು’ ಎಂದು ಹೇಳಿದರು.

ಪದವಿ ಕಾಲೇಜಿನ ಆಡಳಿತಾಧಿಕಾರಿ ಧೀರಜ್ ಯು, ಪ್ರಾಂಶುಪಾಲ ಬಿ.ಬದರಿನಾಥ್‌, ಪ್ಲೇಸ್ಮೆಂಟ್ ಸೆಲ್ ಉಪನ್ಯಾಸಕರಾದ ಧನಲಕ್ಷ್ಮಿ, ಮಹೇಶ್‌, ಬಯೋಕಾನ್‌ ಸಂಸ್ಥೆಯ ಪ್ರೊಡಕ್ಷನ್ ವಿಭಾಗದ ಮಣಿರತ್ನಂ, ರಮೇಶ್ ಕುಮಾರ್, ಶೇಕ್ ಅಲ್ಲಾವುದ್ದೀನ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶರತ್ ಮತ್ತು ಮಣಿಕಂಠನ್ ಪಾಲ್ಗೊಂಡಿದ್ದರು.

ಉದ್ಯೋಗಕ್ಕೆ ಸಂದರ್ಶನ ಎದುರಿಸಲು ಕಾಯುತ್ತಿದ್ದ ಅಭ್ಯರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.