ADVERTISEMENT

ಕೆಜಿಎಫ್‌: ಮೊಳಗಿದ ಕನ್ನಡಾಂಬೆ ಜೈಕಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 14:35 IST
Last Updated 1 ಆಗಸ್ಟ್ 2024, 14:35 IST
ಕೆಜಿಎಫ್‌ ರಾಬರ್ಟಸನ್‌ಪೇಟೆಗೆ ಗುರುವಾರ ಆಗಮಿಸಿದ ಕನ್ನಡ ರಥಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ನೀಡಲಾಯಿತು
ಕೆಜಿಎಫ್‌ ರಾಬರ್ಟಸನ್‌ಪೇಟೆಗೆ ಗುರುವಾರ ಆಗಮಿಸಿದ ಕನ್ನಡ ರಥಕ್ಕೆ ತಾಲ್ಲೂಕು ಆಡಳಿತದಿಂದ ಅದ್ದೂರಿ ಸ್ವಾಗತ ನೀಡಲಾಯಿತು   

ಕೆಜಿಎಫ್‌: ಮುಳಬಾಗಲಿನಿಂದ ತಾಲ್ಲೂಕಿಗೆ ಗುರುವಾರ ಆಗಮಿಸಿದ ಕನ್ನಡ ರಥಕ್ಕೆ ಗಡಿಭಾಗವಾದ ಗುಟ್ಟಹಳ್ಳಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಗುಟ್ಟಹಳ್ಳಿಯಿಂದ ಬೇತಮಂಗಲ, ಕಮ್ಮಸಂದ್ರ ಮತ್ತು ಘಟ್ಟಕಾಮಧೇನಹಳ್ಳಿ ಮಾರ್ಗವಾಗಿ ರಾಬರ್ಟಸನ್‌ಪೇಟೆಗೆ ರಥ ತಲುಪಿತು. ದಾರಿಯುದ್ದಕ್ಕೂ ವಿದ್ಯಾರ್ಥಿನಿಯರು ಸೀರೆ ಉಟ್ಟು ಕುಂಭಕಳಶದ ಸ್ವಾಗತ ನೀಡಿದರು. ವಿದ್ಯಾರ್ಥಿಗಳು ತಮಟೆ ತಾಳಕ್ಕೆ ನೃತ್ಯ ಮಾಡಿದರು. ಎಲ್ಲಡೆ ಕನ್ನಡಾಂಭೆಗೆ ಜೈಕಾರ ಕೂಗಲಾಯಿತು.

ರಾಬರ್ಟಸನ್‌ಪೇಟೆಯ ಮುಖ್ಯ ರಸ್ತೆಯಲ್ಲಿ ಹಾದು ಹೋದ ರಥದಲ್ಲಿದ್ದ ಸ್ತಬ್ದ ಚಿತ್ರಗಳನ್ನು ದಾರಿಹೋಕರು ಆಸಕ್ತಿಯಿಂದ ಗಮನಿಸಿದರು. ಬೆಮಲ್‌ ನಲ್ಲಿ ಕನ್ನಡ ಮಿತ್ರರು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಬೆಮಲ್‌ ಅಧಿಕಾರಿಗಳು ಸ್ವಾಗತ ಮಾಡಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಕೆ.ನಾಗವೇಣಿ, ರಥಕ್ಕೆ ಎಲ್ಲೆಡೆ ಅದ್ದೂರಿಯಾಗಿ ಸ್ವಾಗತ ಸಿಕ್ಕಿದೆ. ತಾಲ್ಲೂಕಿನ ವೆಂಕಟಾಪುರದಲ್ಲಿ ರಥವನ್ನು ತಾಲ್ಲೂಕು ಆಡಳಿತ ವತಿಯಿಂದ ಸ್ವಾಗತಿಸಲಾಯಿತು. ನಂತರ ನಿಗದಿತ ಮಾರ್ಗದಲ್ಲಿ ಸಾಗಿದೆ. ಎಲ್ಲಾ ಸರ್ಕಾರಿ ನೌಕರರು, ಕನ್ನಡ ಪರ ಸಂಘಟನೆಗಳು ಮುಖಂಡರು, ಪಂಚಾಯಿತಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಉತ್ಸಾಹ ತೋರಿಸಿದ್ದಾರೆ. ನಗರದಲ್ಲಿ ತಮಿಳು ಭಾಷಿಕರು ಹೆಚ್ಚಾಗಿದ್ದರೂ, ಅವರು ತೋರಿದ ಕನ್ನಡ ಪ್ರೇಮ ಅನುಕರಣೀಯ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್‌, ಕನ್ನಡ ಸಂಘದ ತ್ಯಾಗರಾಜ್‌, ರಾಧಾಪ್ರಕಾಶ್‌, ಬಾ.ಹಾ.ಶೇಖರಪ್ಪ, ಅಶ್ವಥ್‌, ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.