ADVERTISEMENT

ಕೆಂಪೇಗೌಡ ಜಯಂತಿ; ಕೋಲಾರದಲ್ಲಿ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 10:00 IST
Last Updated 27 ಜೂನ್ 2022, 10:00 IST
   

ಕೋಲಾರ: ಕೋವಿಡ್ ಕಾರಣ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಕೋಲಾರ ‌ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಭಾವಚಿತ್ರ, ಪುತ್ಥಳಿ, ಪಲ್ಲಕ್ಕಿ ಮೆರವಣಿಗೆ ಆರಂಭವಾಯಿತು.

ಜಿಲ್ಲೆಯ ವಿವಿಧ ಗ್ರಾಮಗಳಿಂದ 50ಕ್ಕೂ ಅಧಿಕ ವಾಹನಗಳಲ್ಲಿರಥ,‌‌ ಪಲ್ಲಕ್ಕಿ ತರಲಾಗಿದ್ದು, ನಗರದೊಳಗೆ ಒಂದೂವರೆ ಕಿ.ಮೀ ಉದ್ದಕ್ಕೂ ನಿಂತಿದ್ದವು. ಎತ್ತಿನ ಗಾಡಿ, ಟಾಂಗಾ, ಟ್ರಾಕ್ಟರ್‌ಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಇದರಿಂದ ವಾಹನ ದಟ್ಟಣೆ ಉಂಟಾಯಿತು.

ADVERTISEMENT

ಕಲಾ ತಂಡಗಳು ಕಲಾ ಪ್ರದರ್ಶನ ಪ್ರದರ್ಶಿಸುತ್ತಾ ಸಾಗಿ ಬಂದವು. ತೃತೀಯ ಲಿಂಗಿಗಳ ನೃತ್ಯ ಮೆರುಗು ತುಂಬಿತು. ಯುವಕರು ಕುಣಿದು ಕುಪ್ಪಳ್ಳಿಸಿದರು. ದಾರಿಯುದ್ದಕ್ಕೂ ಮಜ್ಜಿಗೆ, ಪಲಾವ್ ವಿತರಿಸುತ್ತಾ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.