ADVERTISEMENT

ಕೆಜಿಎಫ್‌: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 4:57 IST
Last Updated 16 ಡಿಸೆಂಬರ್ 2025, 4:57 IST
ಕೆಜಿಎಫ್‌ ಬೆಮಲ್‌ ನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಿಂದ ವಶಪಡಿಸಿಕೊಂಡಿರುವ ಗಾಂಜಾದೊಂದಿಗೆ ಪೊಲೀಸರು
ಕೆಜಿಎಫ್‌ ಬೆಮಲ್‌ ನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಿಂದ ವಶಪಡಿಸಿಕೊಂಡಿರುವ ಗಾಂಜಾದೊಂದಿಗೆ ಪೊಲೀಸರು   

ಕೆಜಿಎಫ್‌: ನಗರ ಹೊರವಲಯದ ಕೃಷ್ಣಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಿ, ಆತನಿಂದ ₹ 80 ಸಾವಿರ ಮೌಲ್ಯದ ಗಾಂಜಾವನ್ನು ಬೆಮಲ್‌ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಮಾಲೂರು ತಾಲ್ಲೂಕಿನ ಚಿಕ್ಕಾಪುರ ಗ್ರಾಮದ ವೆಂಕಟೇಶ್‌ (55) ಬಂಧಿತ ಆರೋಪಿ.

ಕೃಷ್ಣಾಪುರದ ಓಣಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಬ್‌ ಇನ್‌ಸ್ಪೆಕ್ಟರ್‌ ಮಾಲಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಆರೋಪಿ ಬಳಿ 855 ಗ್ರಾಂ ಗಾಂಜಾ ಪತ್ತೆಯಾಗಿದೆ. ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ADVERTISEMENT

ಬೆಮಲ್‌ ಪೊಲೀಸ್‌ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ರಘು, ಸಿಬ್ಬಂದಿಗಳಾದ ಮಹೇಂದ್ರ ಕುಮಾರ್‌, ವಿಶ್ವನಾಥ್‌ ದಂಡಿನ್‌, ಮಲ್ಲೇಶ್‌, ಶ್ರೀನಿವಾಸಪ್ಪ ಮತ್ತು ಕೆ.ವಿ.ಶ್ರೀನಿವಾಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.