ಬೇತಮಂಗಲ: ಬಡವರ ಪಾಲಿನ ಬಂಗಾರು ತಿರುಪತಿ(ಗುಟ್ಟಹಳ್ಳಿ)ಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಆಂಧ್ರದ ತಿರುಮಲ-ತಿರುಪತಿ ದೇವಾಲಯದಲ್ಲಿ ಕಲ್ಯಾಣೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮದ ಅನ್ನದಾನಕ್ಕಾಗಿ ಕೆಜಿಎಫ್ ತಾಲ್ಲೂಕಿನ ರೈತರು ಸುಮಾರು 11 ಟನ್ ತರಕಾರಿ ರವಾನಿಸಿದರು.
ಬುಧವಾರ ತರಕಾರಿ ಕಳುಹಿಸುವ ಟಿಟಿಡಿಯ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಯುವ ಮುಖಂಡ ಅರುಣ್ ರೆಡ್ಡಿ, ಇದೇ ಮೊದಲ ಬಾರಿಗೆ ಕೆಜಿಎಫ್ ತಾಲ್ಲೂಕಿನಿಂದ ತಿರುಪತಿಯ ದೇಗುಲಕ್ಕೆ ವಿವಿಧ ಬಗೆಯ ತರಕಾರಿಗಳನ್ನು ನೇರವಾಗಿ ರೈತರಿಂದ ಕಲ್ಯಾಣೋತ್ಸವದ ಅನ್ನದಾನಕ್ಕೆ ಕಳುಹಿಸಲಾಗಿದೆ ಎಂದರು.
ಮುಖಂಡರಾದ ಪೂಗಾನಹಳ್ಳಿ ಮಂಜುನಾಥ್, ಗ್ರಾಪಂ ಸದಸ್ಯ ನರೇಂದ್ರ, ಯುವ ಮುಖಂಡ ಅಭಿಲಾಷ್ ರೆಡ್ಡಿ, ರೆಡ್ಡಿ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ, ಕೃಷ್ಣಾರೆಡ್ಡಿ, ಮಂಜುನಾಥ್, ಗಂಗಿ ರೆಡ್ಡಿ, ರೈತ ಮುಖಂಡ ಹರೀಕುಮಾರ್, ದೇಗುಲ ಪೇಷ್ಕರ್ ಸುರೇಶ್, ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಬಿಆರ್‌ಪಿ ಶಂಕರ್, ದಾದೇನಹಳ್ಳಿ ನರೇಶ್, ರವಣರೆಡ್ಡಿ ಸೇರಿದಂತೆ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.