ADVERTISEMENT

ಕೆಜಿಎಫ್: ತಂಬಾಕು ಉತ್ಪನ್ನ ಮಾರಾಟದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:01 IST
Last Updated 28 ಫೆಬ್ರುವರಿ 2026, 3:01 IST
ಕೆಜಿಎಫ್ ನಗರದಲ್ಲಿ ತಂಬಾಕು ಮತ್ತಿತರ ನಿಷೇಧಿತ ಉತ್ಪನ್ನ ಮಾರಾಟದ ವಾಣಿಜ್ಯ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು
ಕೆಜಿಎಫ್ ನಗರದಲ್ಲಿ ತಂಬಾಕು ಮತ್ತಿತರ ನಿಷೇಧಿತ ಉತ್ಪನ್ನ ಮಾರಾಟದ ವಾಣಿಜ್ಯ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು   

ಕೆಜಿಎಫ್: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಕೋಲಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ ಮತ್ತು ಕೆಜಿಎಫ್ ರಾಬರ್ಟ್‌ಸನ್‌ಪೇಟೆ ಪೊಲೀಸರು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಲಾಗಿದೆ.

ನಗರದ ವಿವಿಧ ಬೀದಿಗಳಲ್ಲಿನ ವಾಣಿಜ್ಯ ಮಳಿಗೆ, ಬಾರ್ ಮತ್ತು ರೆಸ್ಟೋರೆಂಟ್, ಟೀ ಅಂಗಡಿ, ಚಿಲ್ಲರೆ ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಕೋಕಾ ಕಾಯ್ದೆ ಅಡಿಯಲ್ಲಿ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದರು.

ಅಧಿಕಾರಿಗಳು ತಂಬಾಕು ಮತ್ತಿತರ ನಿಷೇಧಿತ ವಸ್ತುಗಳ ಬಳಕೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಕರಪತ್ರ ಅಂಚಿ ಅರಿವು ಮೂಡಿಸಿದರು. ಜೊತೆಗೆ ಅಂಗಡಿ ಮುಂಗಟ್ಟುಗಳ ಮುಂದೆ ಕಡ್ಡಾಯವಾಗಿ ತಂಬಾಕು ಮತ್ತಿತರ ನಿಷೇಧಿತ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ನಾಮಫಲಕ ಅಳವಡಿಸಬೇಕು ಎಂದು ತಿಳಿಸಿದರು.

ADVERTISEMENT

ಈಗಾಗಲೇ ಅರಿವು ಮೂಡಿಸಿದ್ದರೂ ಕಾನೂನು ಉಲ್ಲಂಘಿಸಿ ಮಾರಾಟ ಹಾಗೂ ನಾಮಫಲಕ ಹಾಕದವರಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಪಿ.ಮಹಮದ್ ತಿಳಿಸಿದರು.

ಜಿ.ಎನ್.ಮಂಜುನಾಥ, ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ಪ್ರಸನ್ನ ಕುಮಾರ್, ವಿನಯ್, ಜಿತೇಂದ್ರ, ಪೊಲೀಸ್ ಇಲಾಖೆಯ ಎಂ. ರಾಮಾಂಜನಪ್ಪ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.