ಕೋಲಾರ: ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ. ಸಹಕಾರ ಕ್ಷೇತ್ರದಲ್ಲಿನ ಅವಕಾಶಗಳಿಗೆ ರಾಜಕಾರಣ ಬಳಸಿದರೆ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ, ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.
ತಾಲ್ಲೂಕಿನ ಅವನ್ಯ ರೆಸಾರ್ಟ್‍ನಲ್ಲಿ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ಕಚೇರಿಯ ಉಪವ್ಯವಸ್ಥಾಪಕರು, ಸಹಾಯಕ ವ್ಯವಸ್ತಾಪಕರು, ವಿಸ್ತರಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರಗಳು ಉತ್ತಮ ಸಾಧನೆಯ ಮೂಲಕ ಎತ್ತರದಲ್ಲಿದೆ. ಕೋಮುಲ್ ಒಕ್ಕೂಟ ನಾನಾ ಕಾರ್ಯಕ್ರಮಗಳನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.
ಸಹಕಾರ ಸಂಸ್ಥೆಗಳ ಮೂಲಕ ಹಾಲಿನ ಡೇರಿಗಳಿಗೆ ಕಾಮನ್ ಸಾಫ್ಟ್‌ವೇರ್ ಅಳವಡಿಕೆಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಹಾಲು ಒಕ್ಕೂಟಗಳಲ್ಲಿ ಮಂಗಳೂರು ಒಕ್ಕೂಟ ಬಿಟ್ಟರೆ, ಹಾಸನ, ಬೆಂಗಳೂರು ಜಿಲ್ಲೆಗಳು ಸಹ ಹಾಲಿನ ದರ ಹೆಚ್ಚಳ ಮಾಡಿಲ್ಲ. ಕೋಲಾರ ಹಾಲು ಒಕ್ಕೂಟ ಹೆಚ್ಚಿನ ದರವನ್ನು ನೀಡುತ್ತಿದೆ. ಹಾಲು ಉತ್ಪಾದಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಕೋಲಾರ ಒಕ್ಕೂಟ ವಿಭಜನೆ ನಂತರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ (ಚಿಮುಲ್) ಇನ್ನೂ ಚುನಾವಣೆ ನಡೆದಿಲ್ಲ ಎಂದರು.
ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ‘ಹಾಲು ಒಕ್ಕೂಟದಿಂದ ಹಾಲಿನ ಡೇರಿಗಳಿಗೆ ಗುಣಮಟ್ಟದ ಮೇಲೆ ಹಾಲಿನ ದರ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಗುಣಮಟ್ಟ ಇಲ್ಲದ ಹಾಲಿನಿಂದ ಒಕ್ಕೂಟ ಮತ್ತು ರೈತರಿಗೆ ಇಬ್ಬರಿಗೂ ತೊಂದರೆಯಾಗುತ್ತಿದೆ. ಹಾಲು ಉತ್ಪಾದಕರು ಸಹ ಗುಣಮಟ್ಟದ ಹಾಲನ್ನು ಡೇರಿಗಳಿಗೆ ನೀಡುವ ಮೂಲಕ ಹೆಚ್ಚಿನ ದರವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ವಿಸ್ತರಣಾಧಿಕಾರಿಗಳು ಮುತುವರ್ಜಿ ವಹಿಸಿ ಕಾಮನ್ ಸಾಫ್ಟ್‌ವೇರ್ ಬಳಸಿಕೊಳ್ಳಲು ಮುಂದಾಗಬೇಕು. ಸಹಕಾರ ರಂಗದ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ನ ಅನಿವಾರ್ಯ ಬಹಳ ಇದೆ, ಈ ಸಂಬಂಧ ತರಬೇತಿಯನ್ನು ಅಧಿಕಾರಿಗಳು ಪಡೆಯುವ ಮೂಲಕ ಮನಪರಿವರ್ತನೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಆರ್ ರಾಮಚಂದ್ರಗೌಡ ಮಾತನಾಡಿ, ಕೋಮುಲ್ ಮತ್ತು ಡಿ.ಸಿ.ಸಿ ಬ್ಯಾಂಕ್ ಜಿಲ್ಲೆಯ ರೈತರ ಮತ್ತು ಮಹಿಳೆಯರ ಎರಡು ಕಣ್ಣುಗಳು ಇದ್ದಂತೆ. ಸಹಕಾರ ಕ್ಷೇತ್ರಗಳು ಎಂದಿಗೂ ಸಹ ರಾಜಕೀಯ ಮುಕ್ತವಾಗಿ ಇರಬೇಕೆಂದು ತಿಳಿಸಿದರು.
ಸಭೆಯಲ್ಲಿ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಎಚ್.ವಿ.,ನಾಗರಾಜ್, ಎ.ಸಿ ನಾಗರಾಜ್, ಕಾಂತಮ್ಮ, ಬಿ.ವಿ ಸಾಮೇಗೌಡ, ಕೋಮುಲ್ ನಿರ್ದೇಶಕರಾದ ಚಂಜಿಮಲೆ ಬಿ. ರಮೇಶ್, ಕೆ.ಕೆ.ಮಂಜು, ಶ್ರೀನಿವಾಸ್, ಯೂನಿಸ್ ಷರಿಫ್, ಮುಖಂಡರಾದ ಉರಿಗಿಲಿ ರುದ್ರುಸ್ವಾಮಿ, ಅ.ಮು ಲಕ್ಷ್ಮೀನಾರಾಯಣ, ಮೂರಾಂಡಹಳ್ಳಿ ಗೋಪಾಲಪ್ಪ, ಪೆಮ್ಮಶೆಟ್ಟಹಳ್ಳಿ ಸುರೇಶ್, ಪಾಕರಹಳ್ಳಿ ವೆಂಕಟೇಶ್, ಗೋವರ್ಧನರೆಡ್ಡಿ, ಶಂಕರನಾರಾಯಣಗೌಡ, ವಿ.ರಘುಪತಿರೆಡ್ಡಿ, ಎನ್.ನಾಗರಾಜ್, ಕೆ.ಎಂ.ಮಂಜುನಾಥ್, ಅರುಣಮ್ಮ, ಪಾಪಣ್ಣ ವಿ, ಪಿ.ಎನ್.ಕೃಷ್ಣಾರೆಡ್ಡಿ, ಕೆ.ಎಂ.ವೆಂಕಟೇಶಪ್ಪ, ಷೇಕ್ ಅಹಮದ್, ಕೆ.ಎಸ್.ನವೀನ್, ಡಾ.ಚೇತನ್, ಭಾರತಿ, ಎಸ್.ಎನ್.ವೇಣುಗೋಪಾಲ್, ಎನ್.ಲಕ್ಷ್ಮಿದೇವಮ್ಮ ಇದ್ದರು.
ರಾಜ್ಯಮಟ್ಟದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಚಿಕ್ಕಬಳ್ಳಾಪುರದ ಹಾಲು ಒಕ್ಕೂಟಕ್ಕೆ ಇನ್ನೂ ಚುನಾವಣೆ ನಡೆದಿಲ್ಲ–ಶಾಸಕ ಡೇರಿಗೆ ಗುಣಮಟ್ಟದ ಹಾಲು ಪೂರೈಸಲು ಮನವಿ
ಸಹಕಾರ ಕ್ಷೇತ್ರಗಳ ಪ್ರಗತಿಯೂ ಸರ್ಕಾರದೊಂದಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆಕೆ.ವೈ.ನಂಜೇಗೌಡ ಶಾಸಕ ಕೋಮುಲ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.