ADVERTISEMENT

ಮದುವೆ ಆಮಿಷ ಒಡ್ಡಿ ಮೋಸ: ದಲಿತ ಮುಖಂಡನ ವಿರುದ್ಧ ಪ್ರಕರಣ

ದಲಿತ ಯುವತಿ ದೂರು* ಜೈ ಭೀಮ್ ಶ್ರೀನಿವಾಸ್ ಪರಾರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:56 IST
Last Updated 21 ನವೆಂಬರ್ 2025, 6:56 IST
ಪ್ರಮುಖ ಆರೋಪಿ ಜೈ ಭೀಮ್ ಶ್ರೀನಿವಾಸ್
ಪ್ರಮುಖ ಆರೋಪಿ ಜೈ ಭೀಮ್ ಶ್ರೀನಿವಾಸ್   

ಬೇತಮಂಗಲ: ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷಗಳಿಂದ ತನ್ನನ್ನು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ದಲಿತ ಯುವತಿ, ಅಂಬೇಡ್ಕರ್ ಯುವ ವೇದಿಕೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ವಿರುದ್ಧ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ.  

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಲೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನ್ಯಾಯ ಕೋರಿ ಯುವತಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.

ಹೋರಾಟವೊಂದರಲ್ಲಿ ಶ್ರೀನಿವಾಸ್ ಪರಿಚಯವಾಗಿತ್ತು. ಪ್ರೀತಿಸುವುದಾಗಿ ಒಂದು ವರ್ಷ ತನ್ನ ಹಿಂದೆ ಬಿದ್ದಿದ್ದರು. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಶ್ರೀನಿವಾಸ್ ಮದುವೆ ಆಗಲು ನಿರಾಕರಿಸಿದಾಗ ಯುವತಿ ಒಂದು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ. ಈಗಲಾದರೂ ಕಾನೂನು ರೀತಿ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕೆಂದು ಪೊಲೀಸರಲ್ಲಿ ಬೇಡಿದ್ದಾರೆ.

ಯುವತಿ ದೂರು ಕೊಟ್ಟ ತಕ್ಷಣ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಮುಂದಾಗಿದ್ದು ಆರೋಪಿ ಕುಟುಂಬ ಸಮೇತ  ಪರಾರಿಯಾಗಿದ್ದಾನೆ. ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು
ಗುರುರಾಜ್ ಚಿಂತಕಲ್ ಬೇತಮಂಗಲ ಪಿಎಸ್ಐ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.