ADVERTISEMENT

ಮುಳಬಾಗಿಲು: ರಸ್ತೆಗೆ ಹರಿದ ಕೆರೆ ಕೋಡಿ ನೀರಿನಲ್ಲಿ ಮೀನು ಶಿಕಾರಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:56 IST
Last Updated 13 ಅಕ್ಟೋಬರ್ 2025, 6:56 IST
ಕೋಡಿ ನೀರಿನಲ್ಲಿ ಮೀನುಗಳನ್ನು ಹಿಡಿಯಲು ಮುಗಿಬಿದ್ದಿ ಜನರು
ಕೋಡಿ ನೀರಿನಲ್ಲಿ ಮೀನುಗಳನ್ನು ಹಿಡಿಯಲು ಮುಗಿಬಿದ್ದಿ ಜನರು   

ಮುಳಬಾಗಿಲು: ತಾಲ್ಲೂಕಿನಲ್ಲಿ ಸತತ ಮಳೆಯಿಂದ ಕೆರೆಗಳು ತುಂಬಿ ಕೋಡಿ ಹರಿಯುತ್ತಿದೆ. ಭಾನುವಾರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಾರ್ವಜನಿಕರು ಮೀನು ಹಿಡಿಯುವ ದೃಶ್ಯ ಕಂಡು ಬಂದಿತು.

ತಾಲ್ಲೂಕಿನ ಊರುಕುಂಟೆ, ಮಿಟ್ಟೂರು, ಹೊಸಕೆರೆ, ಸಿದ್ಧಘಟ್ಟ, ಸೋಮೇಶ್ವರಪಾಳ್ಯ ಸೇರಿದಂತೆ ಅನೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಹಾಗೆಯೇ ಮುಳಬಾಗಿಲು ಹೊರವಲಯದ ಪೊಲೀಸ್ ಠಾಣೆ ಪಕ್ಕದ ಕೆರೆ ಕೋಡಿ ಹರಿಯಿತು. ಕಾಲುವೆ ಮುಚ್ಚಿಹೋಗಿರುವ ಪರಿಣಾಮ ಈ ನೀರು ರಾಷ್ಟ್ರೀಯ ಹೆದ್ದಾರಿ 75ರ ಪಾದಚಾರಿ ಮಾರ್ಗ ಮತ್ತು ಪೊಲೀಸ್ ಠಾಣೆ ಮುಂಭಾಗದಲ್ಲಿ ಹರಿಯಿತು.

ಕೋಡಿ ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಮೀನುಗಳನ್ನು ಸಾರ್ವಜನಿಕರು ಬರಿ ಕೈಗಳಿಂದಲೇ ಹಿಡಿಯಲು ಮುಂದಾದರು. ಕೆಲವರು ಪ್ಲಾಸ್ಟಿಕ್ ಕವರ್‌ ಮತ್ತು ಡಬ್ಬಿಗಳಲ್ಲಿ ಮೀನುಗಳನ್ನು ಸಂಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.