ಮುಳಬಾಗಿಲು: ಇತ್ತೀಚೆಗೆ ತಾಲ್ಲೂಕಿನ ಕೋನಂಗುಂಟೆ ಸಮೀಪದಲ್ಲಿ ಕೂಲಿ ಕೆಲಸಗಳಿಗೆಂದು ಹೋಗಿ ವಾಪಸ್ ಮನೆಗೆ ಬರುವಾಗ ನಡೆದ ಅಪಘಾತಗಳಲ್ಲಿ ಮೃತರಾದ ಐದು ಮಂದಿ ಕುಟುಂಬಗಳಿಗೆ ಶುಕ್ರವಾರ ಶಾಸಕ ಸಮೃದ್ಧಿ ಮಂಜುನಾಥ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಚೆಕ್ಕುಗಳನ್ನು ವಿತರಿಸಿದರು.
ಇತ್ತೀಚಿಗೆ ತಾಲ್ಲೂಕಿನ ಕೋನಂಗುಂಟೆ ಗ್ರಾಮದ ವೆಂಕಟರವಣಪ್ಪ ಹಾಗೂ ಪತ್ನಿ ಅಲವೇಲಮ್ಮ ಮತ್ತು ಅದೇ ಗ್ರಾಮದ ರಾದಪ್ಪ ಹಾಗೂ ನಾಗೇನಹಳ್ಳಿ ಗ್ರಾಮದ ವೆಂಕಟರಾಮಪ್ಪ ಹಾಗೂ ಪತ್ನಿ ಗಾಯತ್ರಮ್ಮ ಕೂಲಿ ಕೆಲಸಕ್ಕೆಂದು ಹೋಗಿ ವಾಪಸ್ ಬರುವಾಗ ಕೋನಂಗುಂಟೆ ಬಳಿ ನಡೆದ ಭಯಂಕರ ಅಪಘಾತದಲ್ಲಿ ಮೃತರಾಗಿದ್ದರು. ಆಗ ವೈಯಕ್ತಿಕವಾಗಿ ನಗದು ಹಣ ನೀಡಿದ್ದ ಶಾಸಕ ಸಮೃದ್ಧಿ ಮಂಜುನಾಥ್ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಮೃತರ ಕುಟುಂಬಗಳ ಮಕ್ಕಳಾದ ಗಿರೀಶ್, ವರಲಕ್ಷ್ಮೀ ಹಾಗೂ ನಾಗೇನಹಳ್ಳಿ ಸಂಜಯ್ ಕುಮಾರ್ ಎಂಬುವವರಿಗೆ ಪರಿಹಾರದ ಚೆಕ್ಕುಗಳನ್ನು ವಿತರಿಸಿದರು.
ತಹಶೀಲ್ದಾರ್ ವಿ.ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ಉಪ ತಹಶೀಲ್ದಾರ್ ಕೊಂಡಯ್ಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.