ಕೆಜಿಎಫ್: ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದ ಮೇಲೆ ಹರಿದು ಹೋದ ಮತ್ತು ತಲೆಕೆಳಗೆ ಮಾಡಿದ ರಾಷ್ಟ್ರ ಧ್ವಜ ಭಾನುವಾರ ಹಾರಿಸಲಾಗಿದ್ದು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಜೆ ದಿನವಾಗಿದ್ದರಿಂದ, ಕಟ್ಟಡದಲ್ಲಿ ಯಾರೂ ಇರಲಿಲ್ಲ. ಬೆಳಿಗ್ಗೆ ಸಮಯದಲ್ಲಿ ಕಚೇರಿಯ ಸಿಬ್ಬಂದಿಯೊಬ್ಬರು ಧ್ವಜ ಆರೋಹಣ ಮಾಡಿ ಹೊರಟು ಹೋಗಿದ್ದಾರೆ. ನಂತರ ಅದು ತಲೆಕೆಳಗಾಗಿದೆ ಎಂದು ತಿಳಿದ ಸ್ಥಳೀಯರು ವಿಷಯವನ್ನು ಕಚೇರಿಯ ಸಿಬ್ಬಂದಿಗೆ ಮುಟ್ಟಿಸಲು ಯತ್ನಿಸಿದರೂ, ಯಾರು ಕಚೇರಿಯಲ್ಲಿ ಇಲ್ಲದೆ ಇರುವುದನ್ನು ಗಮನಿಸಿದರು.
ರಾಷ್ಟ್ರಧ್ವಜದ ಪಾವಿತ್ರ್ಯತೆಯನ್ನು ಕಚೇರಿಯ ಅಧಿಕಾರಿಗಳು ಅರಿತಿಲ್ಲ. ಹರಿದು ಹೋದ ಮತ್ತು ತಲೆಕೆಳಗಾದ ಬಾವುಟವನ್ನು ಹಾರಿಸುವುದು ಅವರ ಜವಾಬ್ದಾರಿಯನ್ನು ತೋರಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧ್ವಜಕ್ಕೆ ಆಗಿರುವ ಅಪಮಾನದ ಚಿತ್ರ ತೆಗೆದಿರುವ ಕ್ಯಾಸಂಬಳ್ಳಿಯ ಲೋಕನಾಥ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.