
ಪ್ರಜಾವಾಣಿ ವಾರ್ತೆ
1
ಕೋಲಾರ: ನಗರ ಹೊರವಲಯದ ಟಮಕದಲ್ಲಿ ಅಕ್ಕಿ ಹಾಗೂ ಗೋದಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಎರಡು ವಾಹನಗಳ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡು ಗೂಡ್ಸ್ ಟೆಂಪೊಗಳನ್ನು ವಶಕ್ಕೆ ಪಡೆದು ನಗರದ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರತಿ ಗೂಡ್ಸ್ ಟೆಂಪೊದಲ್ಲಿ ಸುಮಾರು 40 ಅಕ್ಕಿ ಮೂಟೆ ಹಾಗೂ 40 ಗೋದಿ ಮೂಟೆ ಇದ್ದವು ಎಂಬುದು ಗೊತ್ತಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸುವ ಉತ್ಪನ್ನಗಳಾಗಿವೆ ಎಂಬುದು ತಿಳಿದುಬಂದಿದೆ.
ಕೋಲಾರ ತಾಲ್ಲೂಕು ಆಹಾರ ನಿರೀಕ್ಷಕ ಸುಭಾಷ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಆಹಾರ ಇಲಾಖೆ ಉಪನಿರ್ದೇಶಕಿ ಲತಾ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.